ಬೆಂಗಳೂರಿನಿಂದ ಮುಂಬೈ-ಬಿಜಾಪುರಕ್ಕೆ ಹವಾ ನಿಯಂತ್ರಿತ ‘ಐರಾವತ’
ಬೆಂಗಳೂರಿನಿಂದ ಮುಂಬೈ-ಬಿಜಾಪುರಕ್ಕೆ ಹವಾ ನಿಯಂತ್ರಿತ ‘ಐರಾವತ’
ಸಿಂಧನೂರಿಗೆ ಮಯೂರ ಬಸ್ಸು . ಕೆಎಸ್‌ಆರ್‌ಟಿಸಿಯಿಂದ ಸುಖಾಸೀನ ಬಸ್ಸುಗಳು.
ಬೆಂಗಳೂರಿನಿಂದ ಪುಣೆ ಮಾರ್ಗವಾಗಿ ಮುಂಬಯಿ ತಲುಪುವ ಹವಾ ನಿಯಂತ್ರಿತ ಐರಾವತ ಬಸ್ಸುಗಳ ಸಂಚಾರಕ್ಕೆ ಸಾರಿಗೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅ.7ರಂದು ಚಾಲನೆ ನೀಡಿದರು. ಇದೇ ವೇಳೆಯಲ್ಲಿ ಬೆಂಗಳೂರಿನಿಂದ ಬಿಜಾಪುರಕ್ಕೆ ಐರಾವತ ಬಸ್ಸು ಸಂಚಾರ ಹಾಗೂ ಗಂಗಾವತಿ-ಹೊಸಪೇಟೆ ಮಾರ್ಗವಾಗಿ ಸಿಂಧನೂರಿಗೆ ಮಯೂರ ಬಸ್ಸುಗಳ ಸಂಚಾರಕ್ಕೆ ಖರ್ಗೆ ಹಸಿರು ನಿಶಾನೆ ತೋರಿದರು.
ಕೇವಲ 36 ಸೀಟುಗಳನ್ನು ಹೊಂದಿರುವ ಐರಾವತ ಬಸ್ಸುಗಳು ಇತರ ಬಸ್ಸುಗಳಿಗಿಂತ ಹೆಚ್ಚಿನ ಸೌಲಭ್ಯಗಳನ್ನು ಹೊಂದಿದೆ. ಸುಖಾಸೀನ ಸೀಟುಗಳು, ಹವಾ ನಿಯಂತ್ರಣ ಈ ಬಸ್ಸುಗಳ ವಿಶೇಷ ಆಕರ್ಷಣೆ. ಟೀವಿ ಸವಲತ್ತೂ ಬಸ್ಸುಗಳಲ್ಲುಂಟು.
ಪ್ರತಿದಿನ ಸಂಜೆ 5ಗಂಟೆಗೆ ಬೆಂಗಳೂರು ಕೇಂದ್ರ ಬಸ್‌ನಿಲ್ದಾಣದಿಂದ ಹೊರಡುವ ಐರಾವತ ಬಸ್ಸು ಮರುದಿನ ಮಧ್ಯಾಹ್ನ 12.30ರ ಸುಮಾರಿಗೆ ಮುಂಬಯಿ ತಲುಪಲಿದೆ. ಅದೇರೀತಿ ಸಂಜೆ 4.30ಕ್ಕೆ ಮುಂಬಯಿ ಬಿಡುವ ಬಸ್ಸು ಮರುದಿನ ಮಧ್ಯಾಹ್ನ 1ರ ಸುಮಾರಿಗೆ ಬೆಂಗಳೂರು ತಲುಪಲಿದೆ. ಟಿಕೇಟ್ ದರ- ಮುಂಬಯಿಗೆ 975 ರುಪಾಯಿ, ಪುಣೆಗೆ 825 ರುಪಾಯಿ.
ಬೆಂಗಳೂರಿನಿಂದ ಬಿಜಾಪುರಕ್ಕೆ ತೆರಳುವ ಐರಾವತ ಬಸ್ಸು, ರಾತ್ರಿ 9.30ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 7.30ಕ್ಕೆ ಬಿಜಾಪುರ ತಲುಪಲಿದೆ. ಅದೇರೀತಿ ರಾತ್ರಿ 9ಕ್ಕೆ ಬಿಜಾಪುರದಿಂದ ಹೊರಡುವ ಬಸ್ಸು ಬೆಳಗ್ಗೆ 7ರ ವೇಳೆಗೆ ಬೆಂಗಳೂರು ಮುಟ್ಟಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications