ಲೋಕ ಕಲ್ಯಾಣಕ್ಕಾಗಿ ಲೋಕಾಯುಕ್ತ ವೆಂಕಟಾಚಲಗೆ ಹೆಚ್ಚಿನ ಅಧಿಕಾರ

ಲೋಕ ಕಲ್ಯಾಣಕ್ಕಾಗಿ ಲೋಕಾಯುಕ್ತ ವೆಂಕಟಾಚಲಗೆ ಹೆಚ್ಚಿನ ಅಧಿಕಾರ
ಪ್ರತಿದಿನ ಸರಕಾರಿ ಕಚೇರಿ ಮೇಲೆ ದಾಳಿ, ಮೊದಲ ಸುತ್ತಿನಲ್ಲಿಯೇ 45 ಕೋಟಿ

ಬೆಂಗಳೂರು : ಲೋಕ ಕಲ್ಯಾಣಕ್ಕಾಗಿ ಲೋಕಾಯುಕ್ತ ವೆಂಕಟಾಚಲ ತಮ್ಮ ಎರಡನೇ ಇನ್ನಿಂಗ್ಸ್‌ನ್ನು ಬುಧವಾರ(ಸೆ.6)ದಿಂದ ಆರಂಭಿಸಿದ್ದಾರೆ. ಲೋಕಾಯುಕ್ತರ ಬಲವೃದ್ಧಿಗೆ ಸುಗ್ರೀವಾಜ್ಞೆ ಹೊರಡಿಸುವ ಭರವಸೆ ಮುಖ್ಯಮಂತ್ರಿಗಳಿಂದ ವೆಂಕಟಾಚಲರಿಗೆ ಗುರುವಾರ ಸಿಕ್ಕಿದೆ. ವೆಂಕಟಾಚಲರ ಹೆಸರು ಕೇಳಿದರೆ ಬೆಚ್ಚುವ ಸರಕಾರಿ ಅಧಿಕಾರಿಗಳಿಗೆ ಚಳಿ ಶುರುವಾಗಿದೆ.

ಸರಕಾರಿ ಅಧಿಕಾರಿಗಳ ಮೇಲಿನ ಭ್ರಷ್ಟತೆಯ ಆರೋಪಗಳು ಹೆಚ್ಚುತ್ತಿವೆ. ಲಂಚ ಪಡೆಯಬೇಡಿ ಎನ್ನುವ ನನ್ನ ನಯವಾದ ಮಾತುಗಳು ಅವರ ಕಿವಿಗೆ ಬೀಳುತ್ತಿಲ್ಲ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು, ಪ್ರತಿದಿನ ವಿವಿಧ ಇಲಾಖೆಗಳ ಮೇಲೆ ದಿಢೀರ್‌ ದಾಳಿಗೆ ನಿರ್ಧರಿಸಿರುವುದಾಗಿ ಜಸ್ಟೀಸ್‌ ವೆಂಕಟಾಚಲ ತಿಳಿಸಿದ್ದಾರೆ.

ಮೊದಲ ಹೆಜ್ಜೆ : ನಗರದ ಉಪ ನೋಂದಣಾಧಿಕಾರಿಗಳ ಕಚೇರಿ, ತಹಸೀಲ್ದಾರ್‌ ಕಚೇರಿ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ (ಕೆಎಂಡಿಸಿ)ದ ಮೇಲೆ ಆರಂಭಿಕ ದಾಳಿ ಮಾಡಿ, ಸುಮಾರು 45 ಕೋಟಿ ರೂ.ಗಳ ಅವ್ಯವಹಾರವನ್ನು ಪತ್ತೆ ಹಚ್ಚಿದ್ದಾರೆ.

ಆಟೋ ರಿಕ್ಷಾಕ್ಕೆ ಸಾಲ ಪಡೆಯಲು ಹದಿನಾಲ್ಕು ಸಾವಿರ ಕಮೀಷನ್‌ ನೀಡಬೇಕು. ಎಲ್ಲೆಡೆಯೂ ಕಮೀಷನ್‌ ವ್ಯವಹಾರ ಸಾಮಾ ನ್ಯವಾಗಿದೆ. ಭೂಮಿಯೇ ಇಲ್ಲದವರಿಗೆ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಯನ್ನು ಮಂಜೂರು ಮಾಡಲಾಗಿದೆ. 1998 -99 ರಿಂದ 2002-03 ರವರೆಗೆ 51 ಕೋಟಿ ಸಾಲವನ್ನು ನೀಡಿದ್ದು, ಕೇವಲ ನಾಲ್ಕು ಕೋಟಿಯಷ್ಟೇ ಕೆಎಂಡಿಸಿಯಲ್ಲಿ ಮರುಪಾವತಿ ಯಾಗಿದೆ. ತನಿಖೆ ಸಂದರ್ಭದಲ್ಲಿ ಹೊರಬಿದ್ದ, ಇಂತಹ ಅನೇಕ ಅಂಶಗಳ ಬಗೆಗೆ ವೆಂಕಟಾಚಲ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+