ಹಂಪಿ ಜನ ನಿಂತುನೋಡುತ್ತಿದ್ದರು; ಜಾಕಿಚಾನ್ ಕಸ ಬಾಚಿ ತೆಗೆಯುತ್ತಿದ್ದ!
ಹಂಪಿ ಜನ ನಿಂತುನೋಡುತ್ತಿದ್ದರು; ಜಾಕಿಚಾನ್ ಕಸ ಬಾಚಿ ತೆಗೆಯುತ್ತಿದ್ದ!
ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಸ್ಥಳೀಯ ಜನತೆಗೆ ವಿದೇಶಿ ನಟನಿಂದ ನೀತಿಪಾಠ.
ಅಲ್ಲಿ ನಡೆಯುತ್ತಿದ್ದುದು ಚಿತ್ರವೊಂದರ ಶೂಟಿಂಗ್. ಕಸ ತೆಗೆದ ಘಟನೆ ಮಾತ್ರ ಶೂಟಿಂಗ್‌ಗೆ ಸಂಬಂಧಿಸಿದುದಲ್ಲ ; ಅದು ನೈಜ ಘಟನೆ. ವಿಶ್ವಖ್ಯಾತ ನಟನೊಬ್ಬ ಐತಿಹಾಸಿಕ ಸ್ಥಳವೊಂದಕ್ಕೆ ಸಲ್ಲಿಸಿದ ಗೌರವವದು.
ಅಕ್ಟೋಬರ್ 7ರ ಗುರುವಾರ. ಸ್ಥಳ- ಹಂಪಿ. ಮಾರ್ಷಲ್ ಆರ್ಟ್ಸ್ ಕಿಂಗ್ ಜಾಕಿಚಾನ್ ಅಭಿನಯದ ‘ದಿ ಮಿಥ್’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು . ನೆಚ್ಚಿನ ನಟನ ನೋಡಲು ಜನಜಂಗುಳಿ. ಪ್ರಸಿದ್ಧ ವಾಸ್ತುಶಿಲ್ಪ ಕಲ್ಲಿನ ರಥದ ಬಳಿ ಒಂದಷ್ಟು ಕಸ ಬಿದ್ದುದು ಡೇಗೆ ಕಣ್ಣಿನ ಚಾಕಿಚಾನ್ ಕಣ್ಣಿಗೆ ಬಿದ್ದುದು ಆಗಲೇ. ಆಮುನ್ನ ನೆರೆದಿದ್ದ ಜನರ ಗುಂಪಿಗೆ ಕೂಡ ಕಸ ಕಂಡಿತ್ತು . ಆದರೆ ಅವರ್ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ !
ಕಲ್ಲಿನ ರಥದ ಬಳಿಯ ಕಸ ಕಂಡಿದ್ದೇ ತಡ, ಜಾಕಿಚಾನ್ ಬಾಗಿ ಕಸ ಎತ್ತಿಕೊಂಡರು. ಜಾಡಮಾಲಿ ಕೆಲಸ ಮಾಡುವಾಗ ಪ್ರಖ್ಯಾತ ನಟ ಎನ್ನುವ ಹಮ್ಮು ಜಾಕಿಚಾನ್ ಮುಖದಲ್ಲಿ ಕೊಂಚವೂ ಇರಲಿಲ್ಲ . ಅವರು ಜನರ ಗುಂಪಿನ ಕಡೆಗೊಂದು ಅಸಹನೆಯ ನೋಟ ಬೀರಿದರು. ‘ನಿಮಗೆ ಐತಿಹಾಸಿಕ ಸ್ಮಾರಕಗಳ ಮಹತ್ವ ಗೊತ್ತಾ ? ಅವುಗಳನ್ನು ನೀವೇಕೆ ಸ್ವಚ್ಛವಾಗಿಡುವುದಿಲ್ಲ ?’ ಜಾಕಿಚಾನ್ ಪ್ರಶ್ನೆಗೆ ಯಾರೂ ಉತ್ತರಿಸಲಿಲ್ಲ .
ಜಾಕಿ ಒಬ್ಬರೇ ಅಲ್ಲ , ‘ದಿ ಮಿಥ್’ ಚಿತ್ರ ತಂಡವೇ ಹಂಪಿಯ ಸ್ಮಾರಕಗಳ ಕಂಡು ಬೆರಗಾಗಿದೆ. ಚಿತ್ರದ ನಿರ್ದೇಶಕ ಸ್ಟ್ಯಾನ್ಲಿ ಸ್ಟೋನ್ ಹಂಪಿಯ ಸುಂದರ ಸ್ಮಾರಕಗಳ ಬಗ್ಗೆ ಬೆರಗಿನಿಂದ ಕಣ್ಣರಳಿಸುತ್ತಾರೆ. ಇಲ್ಲಿನ ಐತಿಹಾಸಿಕ ಪರಿಸರ-ಸ್ಮಾರಕಗಳಿಗೆ ಹೊಂದುವಂತೆಯೇ ಚಿತ್ರಕಥೆ ಹೆಣೆಯಲಾಗಿದೆ ಎನ್ನುತ್ತಾರೆ ಸ್ಟ್ಯಾನ್ಲಿ . ವಿಪರ್ಯಾಸ ನೋಡಿ, ಸ್ಮಾರಕಗಳ ರಕ್ಷಿಸಬೇಕಾದ ಕನ್ನಡಿಗರಿಗೆ ಮಾತ್ರ ಅದ್ಯಾವ ಹೆಮ್ಮೆಯೂ ಇಲ್ಲ ! ನಮ್ಮ ಪಾಲಿಗೆ ಹಂಪೆ ಹಾಳು ಕೊಂಪೆ!
ಅಂದಹಾಗೆ, ಜಾಕಿಚಾನ್ ಕಸ ಬಳಿದ ಸಂದರ್ಭದಲ್ಲಿ ನಡೆಯುತ್ತಿದ್ದುದು ನೃತ್ಯ ಸನ್ನಿವೇಶವೊಂದರ ಚಿತ್ರೀಕರಣ. ಜಾಕಿ ಜೊತೆ ಹೆಜ್ಜೆ ಹಾಕುತ್ತಿದ್ದುದು ‘ಮರ್ಡರ್’ ಖ್ಯಾತಿಯ ಬಾಲಿವುಡ್ ಬಿಚ್ಚಮ್ಮ ಮಲ್ಲಿಕಾ ಶೆರಾವತ್.
ಮಲ್ಲಿಕಾ ಪುರಾಣ
ಅಖಂಡ ಬ್ರಹ್ಮಚಾರಿ ವಿರುದ್ಧ ಎದೆ ಸೆಟೆಸಿದ ಮಲ್ಲಿಕಾ
ಮುಖಪುಟ / ವಾಟ್ಸ್ ಹಾಟ್












Click it and Unblock the Notifications