ದಸರೆ ಮೇಲೆ ಅರಮನೆ ಕರಿನೆರಳು !
ದಸರೆ ಮೇಲೆ ಅರಮನೆ ಕರಿನೆರಳು !
ಮೈಸೂರು ಅರಮನೆ ಸ್ವಾಧೀನ ಪ್ರಕರಣ ಇದ್ದಕ್ಕಿದ್ದಂತೆ ಜೀವ ಪಡೆದಿದೆ. ಈ ಸಂಬಂಧ ಹೊರಬೀಳುತ್ತಿರುವ ವ್ಯತಿರಿಕ್ತ ಹೇಳಿಕೆಗಳು ಧರ್ಮ ಸಂಪುಟದಲ್ಲಿನ ಒಡಕಿಗೆ ಕನ್ನಡಿಯಂತಿವೆ.
ಭಾರತದ ಶ್ರೇಷ್ಠ ವಾಸ್ತುಶಿಲ್ಪಗಳಲ್ಲೊಂದಾದ ಮೈಸೂರು ಅರಮನೆಯನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುತ್ತಿರುವ ಪ್ರಕ್ರಿಯೆಗಳು ಮತ್ತೆ ಜೀವ ಪಡೆದುಕೊಂಡಿದ್ದು, ದಸರೆಯ ಮೇಲೆ ವಿವಾದದ ಕರಿ ನೆರಳು ಕವಿದಿದೆ. ದಸರಾ ಉತ್ಸವ ಅಕ್ಟೋಬರ್ 15 ರಿಂದ ಆರಂಭವಾಗುತ್ತಿದೆ. ಅದರ ಬೆನ್ನಲ್ಲಿಯೇ ರಾಜ್ಯಸರ್ಕಾರ ಮೈಸೂರು ಅರಮನೆಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿರುವುದು ದಸರಾ ಮೇಲೆ ವಿವಾದದ ಕರಿನೆರಳು ಬೀಳುವ ಆತಂಕಕ್ಕೆ ಆಸ್ಪದ ಕಲ್ಪಿಸಿದೆ.
ಅರಮನೆಗೆ ಸಂಬಂಧಿಸಿದ ಆಸ್ತಿ, ಸ್ವತ್ತು, ಹಣ ವರ್ಗಾವಣೆಗೆ ಸಂಬಂಧಿಸಿದ ಸೆಕ್ಷನ್ 15ರ ಅನ್ವಯ, ರಾಜ್ಯಸರ್ಕಾರ ವಿಶ್ವವಿಖ್ಯಾತ ಮೈಸೂರು ಅರಮನೆಯ ಸ್ವಾಧೀನಕ್ಕೆ ಹಿರಿಯ ಐಎಎಸ್ ಅಧಿಕಾರಿ ವಿನಯ್‌ಕುಮಾರ್‌ರನ್ನು ನೇಮಿಸಿ ಅಧಿಸೂಚನೆ ಹೊರಡಿಸಿದೆ. ಈ ನೇಮಕದ ಬೆನ್ನಿಗೇ ವಿನಯಕುಮಾರ್ ನೇಮಕವನ್ನು ರದ್ದುಪಡಿಸಿರುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್ ಪ್ರಕಟಿಸಿರುವುದು ಸಂಪುಟದಲ್ಲಿನ ತಾಳಮೇಳ ತಪ್ಪಿರುವುದಕ್ಕೆ ನಿದರ್ಶನವಾಗಿದೆ.
ಈ ವಿವಾದ ಇಂದಿನದಲ್ಲ : 1998 ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಅರಮನೆಯತ್ತ ಸರ್ಕಾರ ಗಮನ ಹರಿಸಿ, ಅರಮನೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಅವಕಾಶ ಕಲ್ಪಿಸುವ ಕಾಯ್ದೆಯನ್ನು ತಂದಿತ್ತು. ಇದನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ರಾಜವಂಶದ ಕುಡಿ ಶ್ರೀಕಂಠದತ್ತ ಒಡೆಯರ್ ತಮ್ಮ ವಶದಲ್ಲಿದ್ದ ಸುಮಾರು 750 ಕೆ.ಜಿ.ತೂಕದ ಬಂಗಾರದ ಅಂಬಾರಿಯನ್ನು ದಸರಾ ಸಂದರ್ಭದಲ್ಲಿ ನೀಡಲು ನಿರಾಕರಿಸಿದ್ದರು. ದಸರಾ ನಡೆಯುವುದೇ ಅನುಮಾನವಾಗಿತ್ತು. ಅಂತಿಮವಾಗಿ ರಾಜಿ ಸಂಧಾನಗಳ ಮೂಲಕ ಪರಿಸ್ಥಿತಿ ತಿಳಿಯಾಗಿತ್ತು.
ಜನತಂತ್ರದ ಹೆಸರಲ್ಲಿ ಸರ್ಕಾರ ಅನ್ಯಾಯ ಮಾಡಿದೆ. ಪಿತ್ರಾರ್ಜಿತ ಆಸ್ತಿ ನುಂಗುವ ಮೂಲಕ ಮೂಲಭೂತ ಹಕ್ಕನ್ನು ಕಿತ್ತುಕೊಂಡಿದೆ ಎಂದು ಅರಮನೆ ಸ್ವಾಧೀನ ವಿರೋಧಿಸಿ ಒಡೆಯರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ದಾವೆ ಇನ್ನೂ ಇತ್ಯರ್ಥವಾಗಿಲ್ಲ . ಪರಿಸ್ಥಿತಿ ಹೀಗಿದ್ದರೂ ಧರ್ಮಸಿಂಗ್ ಸರ್ಕಾರ ಅರಮನೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ವಿವಾದಕ್ಕೆ ದಾರಿಮಾಡಿದೆ.
ಪ್ರಸ್ತುತ ಅರಮನೆ ಸರ್ಕಾರದ ವಶದಲ್ಲಿದ್ದು, ಅದರಒಂದು ಭಾಗದಲ್ಲಿ ಒಡೆಯರ್ ಪರಿವಾರ ವಾಸವಾಗಿದೆ. ಅವರನ್ನು ಅಲ್ಲಿಂದ ಖಾಲಿಮಾಡಿಸಿ, ಪರಿಹಾರ ನೀಡುವುದು ಸರ್ಕಾರದ ಉದ್ದೇಶ.
ಇದು ಅಚ್ಚರಿಯ ವಿಷಯ-ಧರ್ಮಸಿಂಗ್
ಮೈಸೂರು ಅರಮನೆಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಅರಂಭಿಸದಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಬುಧವಾರ ತಿಳಿಸಿದ್ದಾರೆ.
ಹುಮ್ನಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಧರ್ಮಸಿಂಗ್- ದಸರಾ ಮಹೋತ್ಸವ ಸಮೀಪದಲ್ಲಿಯೇ ಇದೆ. ಅಲ್ಲದೇ ಇದೊಂದು ಭಾವನಾತ್ಮಕ ಹಾಗೂ ಸೂಕ್ಷ್ಮವಿಚಾರವಾಗಿದೆ ಎಂದರು.
ಅರಮನೆ ಸ್ವಾಧೀನ ಪ್ರಕ್ರಿಯೆಯ ಆದೇಶದ ಬಗೆಗೆ ಅಚ್ಚರಿ ವ್ಯಕ್ತಪಡಿಸಿದ ಮುಖ್ಯಮಂತ್ರಿ ಧರ್ಮಸಿಂಗ್, ಈ ಸಂಬಂಧ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ನೇಮಕವನ್ನು ರದ್ದು ಪಡಿಸಲಾಗಿದೆ. ಉಪಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಉದ್ಘಾಟನೆಗಾಗಿ ನನ್ನನ್ನು ಆಹ್ವಾನಿಸಿದ್ದಾರೆ. ಯಾವುದೇ ಗೊಂದಲಗಳಿಲ್ಲದೇ ಎಂದಿನಂತೆ ದಸರಾ ಆಚರಣೆ ಸಂಭ್ರಮದಿಂದ ಜರುಗಲಿದೆ ಎಂದು ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications