ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಹತ್ತಿರವಾಗುತ್ತಿದೆ -ಎಸ್‌.ಬಂಗಾರಪ್ಪ

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಹತ್ತಿರವಾಗುತ್ತಿದೆ -ಎಸ್‌.ಬಂಗಾರಪ್ಪ
ಮನಮೋಹನ್‌ ಸರ್ಕಾರದ ನೀತಿಗಳು ಆರ್ಥಿಕ ಬೆಳವಣಿಗೆಗೆ ಮಾರಕ

ಮಂಗಳೂರು : ರಾಜ್ಯದಲ್ಲಿ ಮಧ್ಯಂತರ ಚುನಾವಣೆಗಳು ಸನ್ನಿಹಿತವಾಗುತ್ತಿವೆ ಎಂದು ಭಾಜಪ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಹೇಳಿದ್ದಾರೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರರಾದ ಕಾಂಗ್ರೆಸ್‌ ಹಾಗೂ ಜಾತ್ಯತೀತ ಜನತಾದಳ ಪಕ್ಷಗಳು ವಿಫಲವಾಗಿವೆ ಎಂದು ಆರೋಪಿಸಿದ ಬಂಗಾರಪ್ಪ - ಮಧ್ಯಂತರ ಚುನಾವಣೆಗಳು ಸಮೀಪಿಸುತ್ತಿವೆ ಎಂದರು. ಅವರು ಅ.5ರಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು.

ಸುಭದ್ರ ಸಮ್ಮಿಶ್ರ ಸರ್ಕಾರ ಎನ್ನುವುದೊಂದು ಭ್ರಮೆ. ಸಮ್ಮಿಶ್ರ ಸರ್ಕಾರದ ಪಾಲುದಾರರ ನಡುವೆ ಹೊಂದಾಣಿಕೆ ಎನ್ನುವುದೇ ಇಲ್ಲ . ಈ ಸಂದರ್ಭದಲ್ಲಿ ಅಕಾಲಿಕ ಚುನಾವಣೆ ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು. ಸ್ಥಳೀಯ ಪ್ರಾಧಿಕಾರಗಳಿಗೆ ಹಣಕಾಸು ನೆರವು ನೀಡದಿರುವ ಧರ್ಮಸಿಂಗ್‌ ಸರ್ಕಾರದ ಕ್ರಮವನ್ನು ಟೀಕಿಸಿದ ಅವರು, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರದಲ್ಲಿನ ಮನಮೋಹನ್‌ಸಿಂಗ್‌ ನೇತೃತ್ವದ ಸಂಯುಕ್ತ ಪ್ರಗತಿಪರ ಒಕ್ಕೂಟದ ಸರ್ಕಾರದ ಆರ್ಥಿಕ ನೀತಿಗಳು ಸಮರ್ಪಕವಾಗಿಲ್ಲ . ಈ ನೀತಿಗಳು ಆರ್ಥಿಕ ಬೆಳವಣಿಗೆಗೆ ಪೂರಕವಾಗಿಲ್ಲ . ವಾಜಪೇಯಿ ಕಾಲದಲ್ಲಿ ಶೇ.4ರಷ್ಟಿದ್ದ ಆರ್ಥಿಕ ಹಿಂಜರಿತದ ದರ ಈಗ ಶೇ.8ಕ್ಕೇರಿದೆ ಎಂದು ಬಂಗಾರಪ್ಪ ದೂರಿದರು.

(ಏಜನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+