ಕ್ರಿಕೆಟ್ ಜ್ವರ : ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಸಂಚಾರ ನಿರ್ಬಂಧ
ಕ್ರಿಕೆಟ್ ಜ್ವರ : ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಸಂಚಾರ ನಿರ್ಬಂಧ
ಪ್ರಮುಖ ರಸ್ತೆಗಳಲ್ಲಿ ಭಾರೀ ವಾಹನಗಳ ಪ್ರವೇಶಕ್ಕೆ ನಿಷೇಧ
ಸಂಚಾರ ಬದಲಾವಣೆಯ ಕುರಿತು ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಸಂಚಾರದಲ್ಲಿ ವಿವಿಧ ಬದಲಾವಣೆಗಳನ್ನು ಸೂಚಿಸಿದೆ. ಅವುಗಳೆಂದರೆ :
ಬಾಳೇಕುಂದ್ರಿ ರಸ್ತೆಯಿಂದ ಕ್ವೀನ್ಸ್ ರಸ್ತೆ ಜಂಕ್ಷನ್, ವಿಂಡ್ಸರ್ ಮೇನರ್‌ನಿಂದ ರಾಜಭವನ ರಸ್ತೆ , ಕ್ಯಾಷ್ ಫಾರ್ಮಸಿಯಿಂದ ಸೇಂಟ್‌ಮಾರ್ಕ್ಸ್ ರಸ್ತೆ , ಟ್ರಿನಿಟಿ ವೃತ್ತದಿಂದ ಎಂಜಿ.ರಸ್ತೆ ಹಾಗೂ ಹಡ್ಸನ್ ವೃತ್ತದಿಂದ ಕಸ್ತೂರಬಾ ರಸ್ತೆ - ಈ ಮಾರ್ಗದಲ್ಲಿ ಟೆಂಪೋ ಸಹಿತ ಭಾರೀ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಕೆಲಕಂಡ ಪ್ರದೇಶಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಅವುಗಳೆಂದರೆ :
ಕ್ವೀನ್ಸ್ ರಸ್ತೆಯಲ್ಲಿ ಸಿಟಿಒ ವೃತ್ತದಿಂದ ಕ್ವೀನ್ಸ್ ಪ್ರತಿಮೆ ವೃತ್ತದವರೆಗೆ. ಸಿಟಿಒ ವೃತ್ತದಿಂದ ತಿಮ್ಮಯ್ಯ ರಸ್ತೆ ಜಂಕ್ಷನ್‌ವರೆಗೆ. ಕಬ್ಬನ್ ರಸ್ತೆಯಲ್ಲಿ ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ ಜಂಕ್ಷನ್‌ವರೆಗೆ. ಲ್ಯಾವೆಲ್ಲೆ ರಸ್ತೆಯಲ್ಲಿ ಕ್ವೀನ್ಸ್ ಪ್ರತಿಮೆ ವೃತ್ತದಿಂದ ಮದ್ರಾಸ್ ಬ್ಯಾಂಕ್ ವೃತ್ತದವರೆಗೆ. ಹಾಗೂ ಮದ್ರಾಸ್ ಬ್ಯಾಂಕ್ ಜಂಕ್ಷನ್ ಮತ್ತು ಆಶೀರ್ವಾದ್ ವೃತ್ತದವರೆಗೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications