ಭಾರತ ರತ್ನ ಪ್ರಶಸ್ತಿಗೆ ರಾಜ್ಯ ಸರ್ಕಾರದಿಂದ ಮೂರು ಹೆಸರು ಶಿಫಾರಸು
ಭಾರತ ರತ್ನ ಪ್ರಶಸ್ತಿಗೆ ರಾಜ್ಯ ಸರ್ಕಾರದಿಂದ ಮೂರು ಹೆಸರು ಶಿಫಾರಸು
ಸರ್ಕಾರದ ಪಟ್ಟಿಯಲ್ಲಿ ಶಿವಕುಮಾರ ಸ್ವಾಮಿ, ಎಸ್.ನಿಜಲಿಂಗಪ್ಪ ಹಾಗೂ ರಮಾನಂದ ತೀರ್ಥ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು- ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ, ಅನ್ನ ಮತ್ತು ಅಕ್ಷರ ದಾಸೋಹದಿಂದ ಪ್ರಖ್ಯಾತರಾಗಿರುವ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ದಿವಂಗತ ರಮಾನಂದ ತೀರ್ಥ ಸ್ವಾಮಿಯವರ ಹೆಸರನ್ನು ಭಾರತರತ್ನ ಪ್ರಶಸ್ತಿಗೆ ಸೂಚಿಸಲು ನಿರ್ಧರಿಸಲಾಗಿದೆ ಎಂದರು.
ಸಂಪುಟದ ಉಪಸಮಿತಿ ಈ ಹೆಸರುಗಳನ್ನು ಆಯ್ಕೆ ಮಾಡಿದೆ. ರಾಷ್ಟ್ರಕ್ಕೆ ಈ ಮೂವರು ಸಲ್ಲಿಸಿದ ಸೇವೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಭಾರತರತ್ನ ಪ್ರಶಸ್ತಿಗೆ ಇವರುಗಳ ಹೆಸರು ಶಿಫಾರಸು ಮಾಡಲಾಗಿದೆ. ಅಲ್ಲದೇ ಸ್ವಾತಂತ್ರ್ಯಹೋರಾಟಗಾರ ವಿ.ಪಿ. ದಯಾಳ್‌ಕರ್‌ರವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಲಾಗಿದೆ ಎಂದು ಧರ್ಮಸಿಂಗ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications