ಬೀದರ್ ಚುನಾವಣೆ ನಂತರ ಉ.ಕ.ದಿ 2 ಸರ್ಕಿಟ್‌ಪೀಠ-ಧರ್ಮಸಿಂಗ್
ಬೀದರ್ ಚುನಾವಣೆ ನಂತರ ಉ.ಕ.ದಿ 2 ಸರ್ಕಿಟ್‌ಪೀಠ-ಧರ್ಮಸಿಂಗ್
ಕೇಂದ್ರ ಸರಕಾರದ ಜೊತೆ ಈಗಾಗಲೇ ಮಾತುಕತೆ...
ಉತ್ತರಕರ್ನಾಟಕದ ಜನತೆಯ ಬಹುದಿನದ ಬೇಡಿಕೆಯಂತೆ ಸರ್ಕೀಟ್ ಪೀಠ ಸ್ಥಾಪಿಸುವ ವಿಚಾರದಲ್ಲಿ ಸರ್ಕಾರ ಕಾಲಹರಣ ಮಾಡದೆ ಕಾರ್ಯ ಪ್ರವೃತ್ತವಾಗಲಿದೆ ಎಂದೂ ಭಾನುವಾರ ಧರ್ಮಸಿಂಗ್ ಹೇಳಿದರು.
ಸರ್ಕಾರ ಹೈಕೋರ್ಟ್ ಪೀಠ ಸ್ಥಾಪನೆಗೆ ಮುಂಚೆ ಸರ್ಕಿಟ್ ಬೆಂಚ್ ಸ್ಥಾ ಪನೆಗೆ ಯತ್ನಿಸುತ್ತದೆ. ಇದಾದ ನಂತರ ಹೈಕೋರ್ಟ್ ಪೀಠ ಸ್ಥಾಪನೆಗೆ ಕಾರ್ಯಪ್ರವೃತ್ತವಾಗಲಿದೆ . ಕೇಂದ್ರ ಸರಕಾರದ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು , ಸಕರಾತ್ಮಕ ಪ್ರತಿಕ್ರಿಯೆ ಬಂದಿದೆ. ಹೈಕೋರ್ಟ್ ಪೀಠ ಇಲ್ಲದೆ ಹೋದರೆ ಸರ್ಕಿಟ್ ಬೆಂಚ್ ಸ್ಥಾಪನೆಗೆ ಅವಕಾಶ ಕೊಡಿ ಎಂದಾಗ ಜೈನ್ ಅವರಿಂದಲೂ ಸಕರಾತ್ಮಕವಾಗಿ ಉತ್ತರಬಂದಿದೆ ಎಂದು ಧರ್ಮಸಿಂಗ್ ತಿಳಿಸಿದರು.
ಇತ್ತೀಚೆಗೆ ವಕೀಲರ ಸಂಘದ ಪದಾಧಿಕಾರಿಗಳು ಧರ್ಮಸಿಂಗ್ ಅವರನ್ನು ಭೇಟಿಯಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸರ್ಕಿಟ್ ಬೆಂಚ್ ಸ್ಥಾಪಿಸಲು ಮನವಿ ಪತ್ರ ಸಲ್ಲಿಸಿದ್ದರು. ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಿಗೆ ಬೇಕಾದ ಸಿಬ್ಬಂದಿ ಒದಗಿಸುವಂತೆಯೂ ವಕೀಲರ ಸಂಘದ ಪದಾಧಿಕಾರಗಳ ಮನವಿಯಲ್ಲಿ ಆಗ್ರಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications