ವರುಣನ ಅಟ್ಟಹಾಸ, ಸಿಡಿಲಿಗೆ ಗುಲ್ಪರ್ಗ-ಬೀದರ್ ಜಿಲ್ಲೆಗಳಲ್ಲಿ 13 ಬಲಿ
ವರುಣನ ಅಟ್ಟಹಾಸ, ಸಿಡಿಲಿಗೆ ಗುಲ್ಪರ್ಗ-ಬೀದರ್ ಜಿಲ್ಲೆಗಳಲ್ಲಿ 13 ಬಲಿ
ಕುರಿಕೋಟಾ ಸೇತುವೆ ಜಲಾವೃತ, ನೆರೆ ರಾಜ್ಯಗಳನಡುವಿನ ಸಂಪರ್ಕ ಕಡಿತ
ಅ.3ರ ಭಾನುವಾರ ಮಧ್ಯಾಹ್ನ ಗುಲ್ಪರ್ಗ ಜಿಲ್ಲೆಯಲ್ಲಿ ಮೂರುಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗುಲ್ಪರ್ಗ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು, ಐದು ಮಂದಿ ಸಾವನ್ನಪ್ಪಿದ್ದರು. ಬಸವ ಕಲ್ಯಾಣದ ನಾರಾಯಣವೃತ್ತದ ಬಳಿ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದ ತಾಯಿ ಮಗಳಿಬ್ಬರೂ ಸಿಡಿಲಿಗೆ ಬಲಿಯಾಗಿದ್ದಾರೆ.
ಬೀದರ್‌ನ ಬಸವಕಲ್ಯಾಣ, ಗುಲ್ಪರ್ಗ ಜಿಲ್ಲೆಯ ಚಿತ್ತಾಪುರ, ಯಾದಗಿರಿ, ಶೋರಾಪುರ ತಾಲೂಕಿನ ಅಣಗೇರಿ ತಾಂಡಾದಲ್ಲಿ ಈ ದುರಂತಗಳು ಸಂಭವಿಸಿವೆ.
ಕುರಿಕೋಟಾ ಬಳಿ ನಿರ್ಮಿಸಲಾಗಿರುವ ತಾತ್ಕಾಲಿಕ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಮಹಾರಾಷ್ಟ್ರ , ಆಂಧ್ರ ಪ್ರದೇಶ, ಕರ್ನಾಕದ ನಡುವಿನ ಸಂಪರ್ಕ ಕಳೆದ 20 ದಿನಗಳಲ್ಲಿ ಎರಡನೇ ಭಾರೀ ಕಡಿದು ಹೋಗಿದೆ. ಕುರಿಕೋಟಾ ಸೇತುವೆ ಮೇಲೆ ಹರಿಯುತ್ತಿರುವ ನೀರಿನ ಪ್ರಮಾಣ ಹೆಚ್ಚಿದ್ದು ಕೆಲ ಗ್ರಾಮಗಳಿಗೆ ನೀರು ನುಗ್ಗಿದೆ. ಇದರಿಂದ ಈ ಭಾಗದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ವರುಣನ ಅಟ್ಟಹಾಸದಿಂದ ಜನರು ನಲುಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications