ರಾಜ್ಯದಲ್ಲಿ ಸದ್ಯದಲ್ಲೇ ಮಧ್ಯಂತರ ಚುನಾವಣೆ : ದೇವೇಗೌಡ ಇಂಗಿತ
ರಾಜ್ಯದಲ್ಲಿ ಸದ್ಯದಲ್ಲೇ ಮಧ್ಯಂತರ ಚುನಾವಣೆ : ದೇವೇಗೌಡ ಇಂಗಿತ
ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್‌ರ 75ನೇ ಜನ್ಮದಿನ ಆಚರಣೆ
ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್‌ರ 75ನೇ ಜನ್ಮ ದಿನಾಚರಣೆಯಲ್ಲಿ ಸಮಾರಂಭದಲ್ಲಿ ಮಾತ ನಾಡಿದ ಅವರು, ರಾಜ್ಯ ಸರಕಾರದಲ್ಲಿ ನಾನು ಹೇಳಿದ್ದೆಲ್ಲ ನಡೆಯುತ್ತದೆ ಎನ್ನುವ ಮಾತಿದೆ. ನಾನೇನೂ ರಿಮೋಟ್ ಕಂಟ್ರೋಲ್ ಅಲ್ಲ. ಅಲ್ಲದೇ ಪರಿಸ್ಥಿತಿ ಮೇಲೆ ಕಂಡಷ್ಟು ಸರಳವಾಗಿಲ್ಲ ಎಂದು ಗೂಢಾರ್ಥದಲ್ಲಿ ಹೇಳಿದರು.
ಈ ಸಮಾರಂಭ ಉದ್ಘಾಟಿಸ ಬೇಕಾಗಿದ್ದ ಮುಖ್ಯಮಂತ್ರಿಗಳು ಬೀದರ್ ಚುನಾವಣೆಯ ಸಿದ್ದತೆಯಿಂದಾಗಿ ಗೈರು ಹಾಜ ರಾಗಿದ್ದಾರೆ. ಅವರ ಪಕ್ಷ ಉಳಿಸಿಕೊಳ್ಳಲು ಅವರು, ನಮ್ಮ ಪಕ್ಷ ಉಳಿಸಿಕೊಳ್ಳಲು ನಾವು ಪ್ರಯತ್ನಪಡುತ್ತೇವೆ. ನನ್ನ ದೇಹ ದಲ್ಲಿ ಮೊದಲಿನ ಶಕ್ತಿ ಉಳಿದಿಲ್ಲ. ತ್ರಿಮೂರ್ತಿಗಳಾದ ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್, ಪಿ.ಜಿ.ಆರ್.ಸಿಂಧ್ಯ ಜೆಡಿಎಸ್ ಪಕ್ಷವನ್ನು ಮುನ್ನಡೆಸುತ್ತಾರೆ ಎಂದರು.
ಜೆ.ಎಚ್.ಪಟೇಲರಲ್ಲಿನ ನಾಯಕತ್ವ ಗುಣಗಳನ್ನು ಕೊಂಡಾಡಿದ ದೇವೇಗೌಡ- ಪಟೇಲರು ನಿಜವಾದ ಅರ್ಥದಲ್ಲಿ ಹೋರಾಟಗಾರರಾಗಿದ್ದರು. ದೇವರಾಜು ಅರಸು ನಂತರ ರಾಜ್ಯ ಕಂಡ ನಿಜವಾದ ಹೋರಾಟಗಾರರವರು ಎಂದರು.
(ಇನ್ಪೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications