ಕನಕನಿಂದಲೇ ಉಡುಪಿಗೆ ಕಳೆ;ಕನಕನ ಮರೆ ಮಾಡಿ ಕೃಷ್ಣನ ಮೆರೆಸಬೇಡಿ
ಕನಕನಿಂದಲೇ ಉಡುಪಿಗೆ ಕಳೆ;ಕನಕನ ಮರೆ ಮಾಡಿ ಕೃಷ್ಣನ ಮೆರೆಸಬೇಡಿ
ಉಡುಪಿಯಲ್ಲಿ ಅಷ್ಠ ಮಠದೊಂದಿಗೆ ಕುರುಬರ ಪರ್ಯಾಯ ಮಠಕ್ಕೆ ಒತ್ತಾಯ
ಅಖಿಲ ಕರ್ನಾಟಕ ಕುರುಬರ ಹಿತರಕ್ಷಣಾ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ನಾವು ಕೂಗು ಹಾಕಿದಾಗ ಕನಕನ ಕಿಂಡಿ ಎನ್ನುವರು. ಆದರೆ ರಾಷ್ಟ್ರೀಯ ನಾಯಕರು ಉಡುಪಿಗೆ ಭೇಟಿ ನೀಡಿದಾಗ, ಕನಕನ ಕಿಂಡಿಯನ್ನು ನವಗ್ರಹ ಕಿಂಡಿ, ಕೃಷ್ಣದೇವಾಲಯ ಎಂದಷ್ಟೇ ಹೇಳುತ್ತಾರೆ. ಈ ಗೊಂದಲಗಳು ಕೊನೆಯಾಗಬೇಕು ಎಂದರು.
ಕನಕನ ಕಿಂಡಿಯಿಂದಲೇ ಉಡುಪಿಗೆ ಸ್ಥಾನ ಬಂದಿದೆ. ಕುರುಬನನ್ನ ಕೆಣಕಬೇಡ, ಕೆಣಕಿ ತಿಣುಕಬೇಡ ಎನ್ನುವ ಗಾದೆ ಮಾತನ್ನು ನಿಜವಾಗಿಸಲು ಸಮುದಾಯ ಹಾಗೂ ಇಂತಹ ವೇದಿಕೆಗಳು ಜಾಗೃತವಾಗಬೇಕು ಎಂದರು.
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠಾಧೀಶ ಶ್ರೀ ಬೀರೇಂದ್ರ ಕೇಶವ ತಾರಕಾನಂದ ಪುರಿ ಸ್ವಾಮೀಜಿ, ಬಿಜೆಪಿಯ ಕೆ.ಎಸ್.ಈಶ್ವರಪ್ಪ, ಮಾಜಿ ಮೇಯರ್ ಜೆ.ಹುಚ್ಚಪ್ಪ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications