ಬಣ್ಣದ ಚಿಟ್ಟೆಗಳ ಜಗತ್ತನ್ನು ಕಾಣಲು ಬನ್ನೇರುಘಟ್ಟ ಅಭಯಾರಣ್ಯಕೆ ಬನ್ನಿ
ಬಣ್ಣದ ಚಿಟ್ಟೆಗಳ ಜಗತ್ತನ್ನು ಕಾಣಲು ಬನ್ನೇರುಘಟ್ಟ ಅಭಯಾರಣ್ಯಕೆ ಬನ್ನಿ
ಚಿಟ್ಟೆಗಳ ವಿನೂತನ ಪಾರ್ಕ್ ಮೇ-ಜೂನ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯ
ಮೈಸೂರು ಮೃಗಾಲಯ ಪ್ರಾಧಿಕಾರ, ಕೇಂದ್ರ ಸರಕಾರದ ಜೈವಿಕ ತಂತ್ರಜ್ಞಾನ ವಿಭಾಗ, ಎಟಿಆರ್‌ಇಇ ಸಂಯುಕ್ತವಾಗಿ ಈ ಯೋಜನೆ ರೂಪಿಸಿದ್ದು, ಉದ್ಯಾನದಲ್ಲಿ ಸಂಶೋಧನೆ, ತರಬೇತಿ, ಶಿಕ್ಷಣ, ಮತ್ತು ಗ್ರಾಮೀಣ ಬದುಕನ್ನು ಸುಧಾರಿಸಲು ಚಿಟ್ಟೆಗಳ ಬಳಕೆ ಕುರಿತು ಅಧ್ಯಯನ ನಡೆಯಲಿವೆ.
ಉದ್ಯಾನವು ಫೆಬ್ರವರಿ ವೇಳೆಗೆ ಪೂರ್ಣವಾಗಲಿದೆ. ಆದರೆ ಆರಂಭದ ಒಂದೆರಡು ತಿಂಗಳು ಇಲ್ಲಿ ಪ್ರಾಯೋಗಿಕ ಅಧ್ಯಯನಗಳು ನಡೆಯಲಿವೆ. ನಂತರ ಸಾರ್ವಜನಿಕರು ಮುಕ್ತವಾಗಿ ವೀಕ್ಷಿಸಬಹುದಾಗಿದೆ. ಉದ್ಯಾನದಲ್ಲಿ ಮೂರು ಗುಮ್ಮಟಗಳನ್ನು ರಚಿಸಲಾಗುತ್ತಿದ್ದು, ಮೊದಲ ಪಾರದರ್ಶಕ ಗುಮ್ಮಟದಲ್ಲಿ ನಾನಾ ರೀತಿಯ ಚಿಟ್ಟೆಗಳನ್ನು ವೀಕ್ಷಿಸಬಹುದು, ಎರಡನೇ ಗುಮ್ಮಟದಲ್ಲಿ ಚಿಟ್ಟೆಗಳ ಛಾಯಾಚಿತ್ರ ಹಾಗೂ ಚಿಟ್ಟೆಗಳ ಅಪರೂಪದ ವಿವರಗಳು ದೊರಕಲಿವೆ. ಮೂರನೇ ಗುಮ್ಮಟದಲ್ಲಿ ಉಪನ್ಯಾಸ, ಕಾರ್ಯಾಗಾರ, ವಿಜ್ಞಾನಕ್ಕೆ ಸಂಬಂಧಿಸಿದ ಚರ್ಚೆಗಳಿಗೆ ಅನುಕೂಲವಾಗುವಂತೆ ಸಭಾಂಗಣವನ್ನು ರೂಪಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications