ನಾಳೆ ಬಿಜೆಪಿ ಯಡಿಯೂರಪ್ಪನವರ ಹುಟ್ಟುಹಬ್ಬ ! ಢುಂ ಢುಂ ಢುಂ......

ನಾಳೆ ಬಿಜೆಪಿ ಯಡಿಯೂರಪ್ಪನವರ ಹುಟ್ಟುಹಬ್ಬ ! ಢುಂ ಢುಂ ಢುಂ......
ಹುಟ್ಟುಹಬ್ಬ ಸಮಾರಂಭಕ್ಕೆ ವಾಜಪೇಯಿ, ವೆಂಕಯ್ಯ, ಬೊಮ್ಮಾಯಿ, ಬಂಗಾರಪ್ಪ,ಅನಂತು.

ಬೆಂಗಳೂರು :ವಿಧಾನ ಸಭೆಯ ವಿರೋಧ ಪಕ್ಷ ದ ನಾಯಕ ಯಡಿಯೂರಪ್ಪ ರವರ 61 ವರ್ಷದ ಹುಟ್ಟು ಹಬ್ಬವನ್ನು ಭಾರತೀಯ ಜನತಾ ಪಕ್ಷ ಅಕ್ಟೋಬರ್‌ 1ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದೆ.

ಹುಟ್ಟು ಹಬ್ಬದ ಸಮಾರಂಭದಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ 50,000 ಜನರು ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರಿಗಾಗಿ ಹೋರಾಡಿದ ಯಡಿಯೂರಪ್ಪ ನವರನ್ನು ಸನ್ಮಾನಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಾಲದ ಬಾಧೆಯನ್ನು ಎದುರಿಸಲಾಗದೆ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ ರೈತರ ಸಮಸ್ಯೆ ಕೊನೆಗೊಂಡಿಲ್ಲ. ಯಡಿಯೂರಪ್ಪರವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಆತ್ಮ ಹತ್ಯೆ ಮಾಡಿಕೊಂಡ ರೈತರ 38 ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗುವುದು. ಅಂದು ಪಕ್ಷದ ಸದಸ್ಯರು ರೋಗಿಗಳಿಗೆ ಹಣ್ಣು ಮತ್ತು ಆಹಾರ ವಿತರಿಸುವರು ಎಂದು ಮೂಲಗಳು ಹೇಳಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯನಾಯ್ಡು, ರಾಜ್ಯಾಧ್ಯಕ್ಷ ಅನಂತಕುಮಾರ್‌, ಹಿರಿಯ ರಾಜಕಾರಣಿಗಳಾದ ಎಸ್‌.ಆರ್‌. ಬೊಮ್ಮಾಯಿ, ಎಸ್‌.ಬಂಗಾರಪ್ಪ, ಸುತ್ತೂರು ಮಠದ ಸ್ವಾಮೀಜಿ, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮುಂತಾದ ಗಣ್ಯರು ಯಡಿಯೂರಪ್ಪ ಹುಟ್ಟುಹಬ್ಬದಲ್ಲಿ ಭಾಗವಹಿಸವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+