‘ಮುಂಬರೊ ಚುನಾವಣೆ ಹಿನ್ನೆಲೆ ಮಹಾರಾಷ್ಟ್ರ ಗಡಿವಿವಾದಗಳ ಕೆದಕಿದೆ’
‘ಮುಂಬರೊ ಚುನಾವಣೆ ಹಿನ್ನೆಲೆ ಮಹಾರಾಷ್ಟ್ರ ಗಡಿವಿವಾದಗಳ ಕೆದಕಿದೆ’
ಮಹಾಜನ್‌ವರದಿಯೇ ಅಂತಿಮವಾಗಿದ್ದು, ರಾಜ್ಯದ ಹಿತಕಾಯಲು ಬದ್ದ
ಕನ್ನಡಪರ ಸಂಘಟನೆಗಳು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮಸಿಂಗ್- ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ಬಿಕ್ಕಟ್ಟುಗಳಿಗೆ ಸಂಬಂಧಿಸಿದಂತೆ ಮಹಾಜನ್ ಸಮಿತಿಯ ವರದಿಯೇ ಅಂತಿಮ ಎಂದರು.
ಸುಪ್ರಿಂಕೋರ್ಟ್‌ಗೆ ಈ ಸಂಬಂಧ ರಾಜ್ಯ ಸಮರ್ಥನೀಯ ಅರ್ಜಿಯನ್ನು ಸಲ್ಲಿಸಲಿದೆ. ಗಡಿ ಸಮಸ್ಯೆ ಎಂದೋ ಮುಗಿದ ಅಧ್ಯಾಯ. ಆದರೆ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ, ಮತ್ತೆ ಈ ವಿಷಯಕ್ಕೆ ಜೀವತುಂಬಿದೆ. ಈ ಸಂಬಂಧ ಬು ಧವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ , ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಉಪಸಮಿತಿ ರಚಿಸಲಾಗಿದೆ. ಅಲ್ಲ ದೇ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸರ್ವಪಕ್ಷಗಳ ನಿಯೋಗದೊಂದಿಗೆ ತೆರಳಿ ಕೇಂದ್ರ ಸರಕಾರದ ಮೂಲಕ ಸಮಸ್ಯೆ ಬಗೆ ಹರಿಸುವುದಾಗಿ ಧರ್ಮಸಿಂಗ್ ತಿಳಿಸಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications