ರಾಯಚೂರು ಜಿಲ್ಲೆಯ ಗಲಗ ಗ್ರಾಮದಲ್ಲಿ ಮಲೇರಿಯಾಕ್ಕೆ 9ಜನ ಬಲಿ
ರಾಯಚೂರು ಜಿಲ್ಲೆಯ ಗಲಗ ಗ್ರಾಮದಲ್ಲಿ ಮಲೇರಿಯಾಕ್ಕೆ 9ಜನ ಬಲಿ
ಗ್ರಾಮವನ್ನು ಸುತ್ತುವರಿದಿರುವ ನಾರಾಯಣಪುರ ಜಲಾಶಯದ ನೀರಿನಿಂದ ಸೊಳ್ಳೆ ಸಂತತಿ ವೃದ್ಧಿ
ಅಂಜಿನಮ್ಮ ಚೆನ್ನಯ್ಯ, ಮಲ್ಲಮ್ಮ ನಾಗಪ್ಪ, ನಾಗರತ್ನಮ್ಮ ದುರ್ಗಪ್ಪ, ಕಾಸಿಂ ಆಲಿ ರೆಹಮಾನ್‌ಸಾಬ್, ಚೆನ್ನಮ್ಮ ಸುಗಪ್ಪ, ಲಾಲ್‌ಸಾಬ್ ಮೆಹಬೂಬ್‌ಸಾಬ್, ಮುದುಕಪ್ಪ ಹನುಮಯ್ಯ, ಹನುಮಂತಿ ಹನುಮಯ್ಯ ಹಾಗೂ ಹನುಮಂತಿ ಹನುಮಂತ್ ಎಂದು ಮಲೇರಿಯಾಕ್ಕೆ ಬಲಿಯಾದವರನ್ನು ಗುರ್ತಿಸಲಾಗಿದೆ.
ಈಚಿನ ದಿನಗಳಲ್ಲಿ ದೇವದುರ್ಗ ತಾಲ್ಲೂಕಿನಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಗೆ ತಲೆಬಿಸಿ ಉಂಟು ಮಾಡಿದೆ. ಮೊಬೈಲ್ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆ ರೂಪಿಸಿದ್ದು , ಮಲೇರಿಯಾ ತಡೆಗೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ.
ಗಲಗ ಗ್ರಾಮವನ್ನು ನಾರಾಯಣಪುರ ಜಲಾಶಯದ ಬಲದಂಡೆಯ ನೀರು ಸುತ್ತುವರಿದಿದ್ದು ಸೊಳ್ಳೆಗಳ ಸಂತಾನ ಅಕ್ಷಯವಾಗಲು ಕಾರಣವಾಗಿದೆ. ಸೊಳ್ಳೆಗಳ ನಿಯಂತ್ರಣ, ರಕ್ತ ಪರೀಕ್ಷೆ , ಔಷಧಿ ಪೂರೈಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications