ಬಿಡದಿ ಕಾರ್ಖಾನೆಯಲ್ಲಿ ವಿಷವಾಯು ಸೇವನೆಯಿಂದಾಗಿ ನಾಲ್ವರ ಸಾವು
ಬಿಡದಿ ಕಾರ್ಖಾನೆಯಲ್ಲಿ ವಿಷವಾಯು ಸೇವನೆಯಿಂದಾಗಿ ನಾಲ್ವರ ಸಾವು
ರಾಸಾಯಿನಿಕ ಕಾರ್ಖಾನೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಅವಘಡ
ಬೆಂಗಳೂರು ಹೊರ ವಲಯದ ಬಿಡದಿಯ ರಾಸಾಯಿನಿಕ ಕಾರ್ಖಾನೆಯಾಂದರಲ್ಲಿ ಸೆ.29ರ ಬುಧವಾರ ವಿಷವಾಯು ಸೇವನೆಗೊಳಗಾದ ನಾಲ್ವರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಪ್ರಜ್ಞೆತಪ್ಪಿ ಬಿದ್ದಿದ್ದ ಈ ಕಾರ್ಮಿಕರನ್ನು ರಕ್ಷಣಾ ಸಿಬ್ಬಂದಿ ಗಮನಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಷವಾಯು ಸೇವನೆಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ತೀವ್ರ ಅಸ್ವಸ್ಥರಾಗಿದ್ದ ಕಾರ್ಮಿಕರು ಉಳಿಯಲಿಲ್ಲ .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications