ಕರ್ನಾಟಕದ ರಸ್ತೆಗಳಿಗೆ ರಂಗು ತುಂಬಲು ಕೇಂದ್ರದಿಂದ 2545 ಕೋಟಿ
ಕರ್ನಾಟಕದ ರಸ್ತೆಗಳಿಗೆ ರಂಗು ತುಂಬಲು ಕೇಂದ್ರದಿಂದ 2545 ಕೋಟಿ
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ 3285 ಕಿ.ಮೀ ವ್ಯಾಪ್ತಿಯ ರಸ್ತೆ ಅಭಿವೃದ್ದಿ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಾಹಿತಿ ತಂತ್ರಜ್ಞಾನದ ಪ್ರಗತಿಗೆ ಪೂರಕವಾಗಲು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿವರೆಗೆ 9 ಕಿ.ಮೀ ಉದ್ದದ ಮೇಲು ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರದೊಂದಿಗೆ ಕೇಂದ್ರ ಕೈಸೇರಿಸಲಿದೆ ಎಂದರು.
ಐ.ಟಿ.ಉದ್ಯಮದ ಸಹಭಾಗಿತ್ವದ ಈ ಯೋಜನೆ ಕಾಮಗಾರಿ 2005ರ ಏಪ್ರಿಲ್ ತಿಂಗಳಲ್ಲಿ ಆರಂಭಗೊಳ್ಳಲಿದೆ. ಈಗಿರುವ ಹೆದ್ದಾರಿಯ ಮಧ್ಯ ಭಾಗದಿಂದ ಏಕ ಸ್ತಂಭ ಅಧಾರದ ಮೇಲೆ ಸೇತುವೆಯನ್ನು ನಿರ್ಮಿಸಲಾಗುವುದು.
ರಾಜ್ಯದಲ್ಲಿ 360 ಕಿ.ಮೀ ಉದ್ದದ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು ಅನುಮೋದನೆ ನೀಡಿರುವುದಾಗಿ ತಿಳಿಸಿದರು.
ರಸ್ತೆ ಅಭಿವೃದ್ದಿ : ರಾಜ್ಯದ ಕುಂದಾಪುರ-ಸುರತ್ಕಲ್(ಎನ್.ಎಚ್.17) ನಡುವಿನ 74 ಕಿ.ಮೀ ಹೆದ್ದಾರಿಯನ್ನು ಚತುಷ್ಪಥಗೊಳಿಸಲು 5ಂಂ ಕೋಟಿ, ಬೆಂಗಳೂರು-ಕೋಲಾರ (ರಾಷ್ಟ್ರೀಯ ಹೆದ್ದಾರಿ 4)ನಡುವಿನ 85 ಕಿ.ಮೀ ವ್ಯಾಪ್ತಿಯ ರಸ್ತೆಯನ್ನು 400 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ.
ನೆಲಮಂಗಳ-ಹಾಸನವರೆಗಿನ(ರಾಷ್ಟೀಯ ಹೆದ್ದಾರಿ 48) 157 ಕಿ.ಮೀ ರಸ್ತೆಯನ್ನು 620 ಕೋಟಿವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿ, ಬೆಂಗಳೂರು-ಹೊಸೂರು(ರಾಷ್ಟ್ರೀಯ ಹೆದ್ದಾರಿ) ನಡುವಿನ 25 ಕಿ.ಮೀ ರಸ್ತೆಯನ್ನು 620 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುವುದು. ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ 16 ಕಿ.ಮೀ ರಸ್ತೆಯನ್ನು ಆರು ಮಾರ್ಗಗಳಾಗಿ ಪರಿವರ್ತಿಸಲಾಗುವುದು. ಬೆಂಗಳೂರಿನಿಂದ ನೆಲಮಂಗಲವರೆಗಿನ 19,5 ಕಿ.ಮೀ ಉದ್ದದ ರಸ್ತೆಯನ್ನು 400 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುವುದು ಎಂದರು.
ದೇಶದ ನಾಲ್ಕು ಪ್ರಮುಖ ನಗರಗಳನ್ನು ಸಂಪರ್ಕಿಸುವ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಂದಿ ನ ಜುಲೈ ಒಳಗೆ ಮುಕ್ತಾಯವಾಗಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ರಸ್ತೆನಿಧಿಯಿಂದ ಕರ್ನಾಟಕ್ಕೆ 279 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದೆ. ಆಮೂಲಕ 3285 ಕಿ.ಮೀ ವ್ಯಾಪ್ತಿ ರಸ್ತೆಯನ್ನು ಅಭಿವೃದ್ದಿಗೊಳಿಸಲಾಗಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ಟಿ.ಆರ್.ಬಾಲು ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications