ಲಿಂಗಸೂಗೂರಿನ ಸತ್ತ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದಿಂದ ಅಮಾನತು ಆದೇಶ
ಲಿಂಗಸೂಗೂರಿನ ಸತ್ತ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದಿಂದ ಅಮಾನತು ಆದೇಶ
ನಾಯಕರ ಕುರಿತೇ ಈ ರೀತಿಯ ಅವಜ್ಞೆಯಾದರೆ ಜನಸಾಮಾನ್ಯರ ಪಾಡೇನು ಪೂಜಾರಿ-ಧರ್ಮಸಿಂಗ್?
ಲಿಂಗಸೂಗೂರು ಬ್ಲಾಕ್ ಕಾಂಗ್ರೆಸ್ ಧ್ಯಕ್ಷ ಶ್ಯಾಮಸುಂದರ ರೆಡ್ಡಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವ ಆದೇಶವನ್ನು ಕೆಪಿಸಿಸಿ ಇತ್ತೀಚೆಗೆ ಹೊರಡಿಸಿದೆ. ವಿಪರ್ಯಾಸವೆಂದರೆ, ಶ್ಯಾಮಸುಂದರ ರೆಡ್ಡಿ ಕಳೆದ ಏಪ್ರಿಲ್‌ನಲ್ಲಿಯೇ ವಿಧಿವಶರಾಗಿದ್ದರು. ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಯ ದಿನವೇ ಅವರ ಸಾವು ಸಂಭವಿಸಿತ್ತು .
ರೆಡ್ಡಿಯವರ ನಿಧನದ ವಾರ್ತೆ ಕೆಪಿಸಿಸಿ ಕಚೇರಿ ತಲುಪಲಿಲ್ಲವೇ ? ಇಲ್ಲ ಎನ್ನುವುದು ಹೇಗೆ? ರೆಡ್ಡಿಯವರ ನಿಧನದ ವಾರ್ತೆ ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಟೀವಿ ವಾಹಿನಿಗಳಲ್ಲಿ ಸುದ್ದಿಯಾಗಿದೆ. ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಹೀಗಿದ್ದೂ ಇದೆಂಥ ಅಭಾಸ !
ಸದಸ್ಯತ್ವ ನೋಂದಣಿ ವಿಷಯಕ್ಕೆ ಸಂಬಂಧಿಸಿದಂತೆ ರೆಡ್ಡಿ ಅವರನ್ನು ಅಮಾನತುಗೊಳಿಸಿರುವುದಾಗಿ ಪ್ರಸ್ತುತ ಕೆಪಿಸಿಸಿ ಆದೇಶ ಹೊರಡಿಸಿದೆ. ಕೆಪಿಸಿಸಿ ಆದೇಶದ ಬಗ್ಗೆ ಸ್ಥಳೀಯ ಕಾಂಗ್ರೆಸ್ಸಿಗರು ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ. ನಾಯಕರ ಕುರಿತೇ ಪಕ್ಷ ಈ ರೀತಿಯ ಅವಜ್ಞೆ ತೋರುವಾಗ ಇನ್ನು ಸಾಮಾನ್ಯರ ಪಾಡೇನು ಎನ್ನುವುದು ಸ್ಥಳೀಯರ ಪ್ರಶ್ನೆ ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications