ಸಾಕಿನ್ನು ಜವಾಬ್ದಾರಿ,ಯುವಕರಿಗೆ ದಾರಿ ಬಿಡುವೆ-ಜನಾರ್ಧನ ಪೂಜಾರಿ
ಸಾಕಿನ್ನು ಜವಾಬ್ದಾರಿ,ಯುವಕರಿಗೆ ದಾರಿ ಬಿಡುವೆ-ಜನಾರ್ಧನ ಪೂಜಾರಿ
ಬೀದರ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಕಾದಿದೆ ಇನ್ನಷ್ಟು ಹಿನ್ನಡೆ ?
ನಗರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ನನ್ನ ಈ ನಿರ್ಧಾರ ಅಚಲ ಎಂದರು.
ಬೀದರ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಪೂಜಾರಿ ಆತಂಕ ವ್ಯಕ್ತಪಡಿಸಿದರು.
ಅಸಮಾಧಾನ : ಕೆಪಿಸಿಸಿ ಅಧ್ಯಕ್ಷ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಪೂಜಾರಿ ಬಗೆಗೆ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅತೃಪ್ತಿ- ಅಸಮಾಧಾನಗಳು ವ್ಯಕ್ತವಾಗುತ್ತಿವೆ. ಜನಾರ್ಧನ ಪೂಜಾರಿ ಕಾರ್ಯವೈಖರಿ ಬಗೆಗೆ ಪಕ್ಷದ ಹೈಕಮಾಂಡ್‌ನಲ್ಲಿ ಸಹಾ ಅತೃಪ್ತಿಯಿದೆ. ಜನಾದೇಶ ಅಥವಾ ಪಕ್ಷದಲ್ಲಿ ತಮ್ಮ ಪರವಾಗಿ ಒಮ್ಮತದ ಅಭಿಪ್ರಾಯ ದೊರಕುವ ಬಗೆಗೆ ಸಂಶಯವಿರುವುದರಿಂದ, ಪೂಜಾರಿ ಜಾಣತನ ಪ್ರದರ್ಶಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದಲ್ಲಿಯೇ ಕೆಲವರು ಗೊಣಗುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications