ಜಾಲಪ್ಪ ಖಳನಾಯಕ ಅಲ್ಲವಂತೆ ; ದಾನಧರ್ಮವೂ ಅವರಿಗೆ ಗೊತ್ತಂತೆ!
ಜಾಲಪ್ಪ ಖಳನಾಯಕ ಅಲ್ಲವಂತೆ ; ದಾನಧರ್ಮವೂ ಅವರಿಗೆ ಗೊತ್ತಂತೆ!
ಹಿಂದುಳಿದ ವರ್ಗದವನೆಂದು ನನಗೆ ಖಳ ಪಟ್ಟ -ಕಾಮೆಡ್-ಕೆ ಜಾಲಪ್ಪ ಆರೋಪ
ಹಿಂದುಳಿದ ವರ್ಗಕ್ಕೆ ಸೇರಿದ ಕಾರಣ ತಮ್ಮ ವಿರುದ್ಧ ಗೂಬೆ ಕೂರಿಸಲಾಗುತ್ತಿದೆ. ಸಿಇಟಿ ಬಿಕ್ಕಟ್ಟಿಗೆ ತಾವೊಬ್ಬರೇ ಹೊಣೆ ಎಂದು ಚಿತ್ರಿಸಲಾಗುತ್ತಿದೆ ಎಂದು ಜಾಲಪ್ಪ ಆಪಾದಿಸಿದರು. ಅವರು ಸೆ.26ರ ಭಾನುವಾರ ಬೆಂಗಳೂರಿನಲ್ಲಿ ನಡೆದ ಆರ್ಯ ಈಡಿಗ ಸಂಘದ ಭವನ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಹಿಂದುಳಿದ ವರ್ಗದ ವ್ಯಕ್ತಿಯಾಬ್ಬ ವೈದ್ಯಕೀಯ ಕಾಲೇಜನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ . ಶಾಮನೂರು ಶಿವಶಂಕರಪ್ಪ ಹಾಗೂ ಕೆಲವು ಮಠಾಧೀಶರು ಸೇರಿದಂತೆ ಕಾಮೆಡ್.ಕೆ ಬಳಗದಲ್ಲಿನ ಹಲವರು ತಮ್ಮಂತೆಯೇ ವೈದ್ಯಕೀಯ ಕಾಲೇಜು ಹೊಂದಿರುವುದನ್ನು ಯಾರೂ ಪ್ರಸ್ತಾಪಿಸುತ್ತಿಲ್ಲ ಎಂದು ಜಾಲಪ್ಪ ಹೇಳಿದರು.
ತಮ್ಮ ಆಸ್ಪತ್ರೆಯಲ್ಲಿ ಕೆಲವು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ಜಾಲಪ್ಪ ಹೇಳಿಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications