ಬೆಂಗಳೂರಲ್ಲಿ ಕ್ರಿಕೆಟ್‌ ಜ್ವರ ಶುರು : ಮಂಗಳವಾರದಿಂದ ಅಭ್ಯಾಸ ಪಂದ್ಯ

ಬೆಂಗಳೂರಲ್ಲಿ ಕ್ರಿಕೆಟ್‌ ಜ್ವರ ಶುರು : ಮಂಗಳವಾರದಿಂದ ಅಭ್ಯಾಸ ಪಂದ್ಯ
ಭಾರತ ಹಾಗೂ ಭಾರತ- ಎ ತಂಡಗಳ ನಡುವೆ ನಾಲ್ಕು ದಿನಗಳ ಹಣಾಹಣಿ

ಬೆಂಗಳೂರು : ಭಾರತ ಸೀನಿಯರ್ಸ್‌ ಹಾಗೂ ಭಾರತ-ಎ ತಂಡಗಳ ನಡುವಿನ ನಾಲ್ಕು ದಿನಗಳ ಅಭ್ಯಾಸ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಸೆ.28ರ ಮಂಗಳವಾರದಿಂದ ನಡೆಯಲಿದೆ. ಪ್ರಸಕ್ತ ಕ್ರಿಕೆಟ್‌ ಋತುವಿನ ಸತತ ಮೂರು ಏಕದಿನ ಸರಣಿಗಳಲ್ಲಿ ಸೋತು ಸುಣ್ಣವಾಗಿರುವ ಭಾರತ ತಂಡಕ್ಕೆ ಆತ್ಮ ವಿಶ್ವಾಸ ವೃದ್ಧಿಸಿಕೊಳ್ಳುವ ವೇದಿಕೆ ಎಂದು ಈ ಪಂದ್ಯವನ್ನು ಬಣ್ಣಿಸಲಾಗಿದೆ.

ಅಕ್ಟೋಬರ್‌ 6ರಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿ ಆರಂಭವಾಗುತ್ತಿದ್ದು , ಚಿನ್ನಸ್ವಾಮಿ ಮೈದಾನದಲ್ಲಿಯೇ ಮೊದಲ ಟೆಸ್ಟ್‌ ನಡೆಯಲಿದೆ. ಹಾಗಾಗಿ ಮೈದಾನದ ನಾಡಿಮಿಡಿತ ಕಂಡುಕೊಳ್ಳಲು ಭಾರತೀಯ ಆಟಗಾರರಿಗೆ ಈ ಪಂದ್ಯ ಅವಕಾಶ ಮಾಡಿಕೊಡಲಿದೆ.

ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಲು ಪೈಪೋಟಿ ನಡೆಸುತ್ತಿರುವ ಯುವ ಆಟಗಾರರಿಗೂ ಈ ಅಭ್ಯಾಸ ಪಂದ್ಯ ಸ್ಪರ್ಧಾ ಕಣವಾಗಿದೆ. ಆರಂಭಿಕ ಆಟಗಾರನ ಸ್ಥಾನ ಗಿಟ್ಟಿಸಲು ಯುವರಾಜ್‌ಸಿಂಗ್‌ ಹಾಗೂ ಆಕಾಶ್‌ ಚೋಪ್ರಾ ನಡುವೆ ತೀವ್ರ ಸ್ಪರ್ಧೆಯಿದೆ. ವಿಕೆಟ್‌ಕೀಪರ್‌ ಸ್ಥಾನಕ್ಕಾಗಿ ಪಾರ್ಥಿವ್‌ ಪಟೇಲ್‌ರಿಗೆ ದಿನೇಶ್‌ ಕಾರ್ತೀಕ್‌ ಹಾಗೂ ಮಹೇಂದ್ರಸಿಂಗ್‌ ಧೋನಿ ಸ್ಪರ್ಧೆಯಾಡ್ಡಿದ್ದಾರೆ.

ತಂಡಗಳು ಇಂತಿವೆ :

ಭಾರತ ಸೀನಿಯರ್ಸ್‌ : ಸೌರವ್‌ ಗಂಗೂಲಿ (ನಾಯಕ), ಆಕಾಶ್‌ ಚೋಪ್ರಾ, ವೀರೇಂದ್ರ ಶೆಹ್ವಾಗ್‌, ರಾಹುಲ್‌ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌, ಯುವರಾಜ್‌ ಸಿಂಗ್‌, ಪಾರ್ಥಿವ್‌ ಪಟೇಲ್‌, ಹರ್ಭಜನ್‌ ಸಿಂಗ್‌, ಇರ್ಫಾನ್‌ ಪಠಾಣ್‌, ಅನಿಲ್‌ ಕುಂಬ್ಳೆ, ಜಹೀರ್‌ ಖಾನ್‌, ದಿನೇಶ್‌ ಕಾರ್ತೀಕ್‌, ಆಂಬಟಿ ರಾಯುಡು ಮತ್ತು ಸಿದ್ಧಾರ್ಥ ತ್ರಿವೇದಿ.

ಭಾರತ- ಎ : ದಿನೇಶ್‌ ಮೊಂಗಿಯಾ (ನಾಯಕ), ಧೀರಜ್‌ ಜಾಧವ್‌, ಗೌತಮ್‌ ಗಂಭೀರ್‌, ಮೊಹಮ್ಮದ್‌ ಕೈಫ್‌, ಶ್ರೀಧರನ್‌ ಶ್ರೀರಾಂ, ಎಸ್‌.ಎಸ್‌.ಪಾಲ್‌, ಮುರಳಿ ಕಾರ್ತೀಕ್‌, ಅಮಿತ್‌ ಭಂಡಾರಿ, ಆಶಿಶ್‌ ನೆಹ್ರ, ಜೋಗೀಂದರ್‌ ಶರ್ಮ, ಶರಣ್‌ದೀಪ್‌ ಸಿಂಗ್‌, ಕಿರಣ್‌ ಮತ್ತು ವೈ.ವೇಣುಗೋಪಾಲ ರಾವ್‌.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+