ಅವರು ಪ್ರಗತಿಪರರು, ಸಂಪ್ರದಾಯವಾದಿ : ಶ್ರೀರಂಗರಿಗೆ ಶತ ನಮನ

ಅವರು ಪ್ರಗತಿಪರರು, ಸಂಪ್ರದಾಯವಾದಿ : ಶ್ರೀರಂಗರಿಗೆ ಶತ ನಮನ
ಶ್ರೀರಂಗರ ಜನ್ಮಶತಮಾನೋತ್ಸವ ಅಂಗವಾಗಿ ಬೆಂಗಳೂರಿನಲ್ಲಿ ವಿಚಾರ ಸಂಕಿರಣ

ಬೆಂಗಳೂರು : ಜನಪದ ಮತ್ತು ವೃತ್ತಿ ರಂಗಭೂಮಿಯ ಬಗೆಗೆ ಅತೃಪ್ತಿ ಹೊಂದಿದ್ದ ಶ್ರೀರಂಗ, ಕನ್ನಡ ರಂಗಭೂಮಿಗೆ ಹೊಸ ದೃಷ್ಟಿಕೋನ ನೀಡಿದರು. ತಮ್ಮ ನಾಟಕಗಳಲ್ಲಿ ಪ್ರೇಕ್ಷಕರೇ ಪಾತ್ರಗಳಾಗುವುದು, ಇನ್ನು ಕೆಲವು ನಾಟಕಗಳಲ್ಲಿ ಪಾತ್ರಗಳಿಗೆ ಹೆಸರೇ ಇಲ್ಲದಿರುವುದು, ಸ್ವಗತ, ಹೀಗೆ ವಿಭಿನ್ನ ನೆಲೆಯಲ್ಲಿ ರಂಗಭೂಮಿಯನ್ನು ದುಡಿಸಿಕೊಂಡರು ಎಂದು ಸಾಹಿತಿ ಡಾ.ಚಂದ್ರಶೇಖರ್‌ ಕಂಬಾರ ಅಭಿಪ್ರಾಯಪಟ್ಟರು.

ನಗರದ ಸೆನೆಟ್‌ ಹಾಲ್‌ನಲ್ಲಿ ‘ಶ್ರೀರಂಗ’ ರ ಜನ್ಮ ಶತಮಾನೋತ್ಸವದ ಪ್ರಯುಕ್ತ ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿ ಸಿದ್ದ ಶ್ರೀರಂಗರ ಬರಹಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

ಬೆಂಗಳೂರು, ಧಾರವಾಡ ಮತ್ತಿತರ ಕಡೆ ರಂಗಚಳವಳಿಗೆ ಶ್ರೀರಂಗ ಕಾರಣಕರ್ತರಾಗಿದ್ದಾರೆ. ಅಲ್ಲದೇ ರಂಗಭೂಮಿ ಯಲ್ಲಿ ತಮ್ಮದೇ ಆದ ವಿಶಿಷ್ಟ ಪ್ರಯೋಗಗಳಿಂದ ಅವರು ಹೆಸರಾಗಿದ್ದರು ಎಂದ ಕಂಬಾರರು-ಶ್ರೀರಂಗರ ಎಲ್ಲಾ ನಾಟಕಗಳನ್ನು ಪ್ರಕಟಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ವಿಚಾರ ಸಂಕಿರಣ ಉದ್ಘಾಟಿಸಿದ ರಂಗ ನಿರ್ದೇಶಕಿ ವಿಜಯ ಮೆಹ್ತಾ ಮಾತನಾಡಿ, ಬಂಡಾಯಗಾರರು ಎಲ್ಲ ಸಂಬಂ ಧಗಳನ್ನು ಧಿಕ್ಕರಿಸಿ ನಿಲ್ಲುತ್ತಾರೆ. ಆದರೆ ಶ್ರೀರಂಗ ಕಡೆಯವರೆಗೆ ಸಂಬಂಧಗಳನ್ನು ಉಳಿಸಿಕೊಂಡಿದ್ದರು. ಲಂಡನ್‌ನಲ್ಲಿ ಶಿಕ್ಷಣ ಪಡೆದ ಶ್ರೀರಂಗರಲ್ಲಿ ಒಬ್ಬ ಸಂಪ್ರದಾಯವಾದಿ ಮತ್ತು ಒಬ್ಬ ಪ್ರಗತಿವಾದಿ ವ್ಯಕ್ತಿತ್ವವಿತ್ತು. ಹೀಗಾಗಿಯೇ ಅವರ ನಾಟಕಗಳು ಪರಿಣಾಮಕಾರಿಯಾಗಿವೆ ಎಂದರು.

ಹಿರಿಯ ವಿಮರ್ಶಕ ಡಾ. ಜಿ.ಎಸ್‌.ಆಮೂರ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲಿದ್ದ ಆರ್‌.ವಿ. ಜಾಗೀರದಾರ್‌ ಅನಂತರ ಆದ್ಯರಂಗಚಾರ್ಯ ಆದರು. ಸಂಸ್ಕೃ ತ ಮನೆತನದವರಾದರೂ, ಸಂಪ್ರದಾಯವಿರೋಧಿ. ಕನ್ನಡ ರಂಗ ಭೂಮಿಯಲ್ಲಿ ಆಧುನಿಕತೆಯ ತರ್ಕ ಮತ್ತು ಪ್ರಗತಿಯ ಚಿಂತನೆಗೆ ಶ್ರೀರಂಗ ಅಡಿಗಲ್ಲು ಹಾಕಿದರು. 1930 ರಿಂದ 1960 ಶ್ರೀರಂಗರಯುಗ ಎನ್ನಬಹುದು ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ. ಸಚ್ಚಿದಾನಂದನ್‌, ಅಗ್ರಹಾರ ಕೃ ಷ್ಣಮೂರ್ತಿ, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+