ಹೊಸಪೇಟೆಯ ಕಲ್ಲೂರಲ್ಲಿ ಶಾಂತವೇರಿ ಗೋಪಾಲಗೌಡರ ಕನಸುಗಳು
ಹೊಸಪೇಟೆಯ ಕಲ್ಲೂರಲ್ಲಿ ಶಾಂತವೇರಿ ಗೋಪಾಲಗೌಡರ ಕನಸುಗಳು
ಸೆ.26ರಂದು ಕಲ್ಲೂರಲ್ಲಿ ಗೋಪಾಲಗೌಡರ ಪ್ರತಿಮೆ ಅನಾವರಣ
ಕಂದಾಯ ಸಚಿವ ಎಂ.ಪಿ.ಪ್ರಕಾಶ್ ಗೋಪಾಲಗೌಡರ ಪ್ರತಿಮೆಯನ್ನು ಅನಾವರಣಗೊಳಿಸುವರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸರ್ವೋದಯ ನಾಯಕ ಎಚ್.ಎಸ್.ದೊರೆಸ್ವಾಮಿ ಕಾರ್ಯಕ್ರಮದಲ್ಲಿ ಹಾಜರಿರುವರು ಎಂದು ಶಾಂತವೀರ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಕಾರ್ಯ ನಿರ್ವಾಹಕ ಟ್ರಸ್ಟಿ ಕಲ್ಲೂರು ಮೇಘರಾಜ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಮುದಾಯ ಭವನ, ಅಧ್ಯಯನ ಕೇಂದ್ರ ಹಾಗೂ ಸಂಜೀವಿನಿ ವನಗಳನ್ನು ಸ್ಥಾಪಿಸಲು ಟ್ರಸ್ಟ್ ಉದ್ದೇಶಿಸಿದೆ ಎಂದು ಮೇಘರಾಜ್ ಹೇಳಿದ್ದಾರೆ.
ಗೋಪಾಲಗೌಡರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗೋಪಾಲಗೌಡರ ಸಹವರ್ತಿ ಹಾಗೂ ದೇವರಾಜ ಅರಸು ಪ್ರಶಸ್ತಿ ವಿಜೇತರಾದ ಎಚ್.ಗಣಪತಿಯಪ್ಪ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಗುಬ್ಬಿ ಜಿ.ಸದಾಶಿವರಾವ್ ಅವರ ಕುರಿತ ಪುಸ್ತಕವನ್ನು ಲೇಖಕ ನಾ.ಡಿಸೋಜ ಬಿಡುಗಡೆ ಮಾಡುವರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications