ಮೈಸೂರು ದಸರ ಎಷ್ಟೊಂದು ಬೇಸರ ; ಬೆಂಗಳೂರು ಮಂದಿ ಅಪಸ್ವರ !
ಮೈಸೂರು ದಸರ ಎಷ್ಟೊಂದು ಬೇಸರ ; ಬೆಂಗಳೂರು ಮಂದಿ ಅಪಸ್ವರ !
ಬೆಂಗಳೂರು-ಮೈಸೂರು ನಡುವೆ 304 ಕೋಟಿ ರೂ.ವೆಚ್ಚದ ಚತುಷ್ಪಥ ರಸ್ತೆ
ಸುಮಾರು 304 ಕೋಟಿ ವೆಚ್ಚದ ಬೆಂಗಳೂರು ಹಾಗೂ ಮೈಸೂರು ನಡುವಿನ, 140 ಕಿ.ಮೀ ಉದ್ದದ ಚತುಷ್ಪಥ ರಸ್ತೆಯ ಕಾಮಗಾರಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಲಿದೆ. ಕಾಮಗಾರಿ ಪೂರ್ಣಗೊಳ್ಳಲು 2005ರ ಜೂನ್‌ವರೆಗೆ ಕಾಯಬೇಕಾಗಿದೆ. ಈ ನಡುವಿನ ದಿನಗಳು ಪ್ರಯಾಣಿಕರ ತಾಳ್ಮೆ ಪರೀಕ್ಷಿಸುತ್ತಿವೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಈ ಕಾಮಗಾರಿ ಆರಂಭಗೊಂಡ ನಂತರ ಪ್ರಯಾಣ ತ್ರಾಸದಾಯಕವಾಗಿದೆ. ಬೆಂಗ ಳೂರಿಂದ ಮೈಸೂರಿಗೆ ಬರಲು ಕನಿಷ್ಠ ನಾಲ್ಕು ತಾಸು ಬಸ್‌ನಲ್ಲಿ ಕೂರಲೇ ಬೇಕಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಪ್ರಯಾಣಕ್ಕೆ ಕೇವಲ ಎರಡು ಗಂಟೆ ಸಾಕಾಗುತ್ತದೆ. ದಸರಾ ವೇಳೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಮಳವಳ್ಳಿ, ಕನಕಪುರ, ಟಿ.ನರಸೀಪುರ ಮಾರ್ಗದಲ್ಲಿ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications