ಕರ್ನಾಟಕದ ಆರ್ಥಿಕ ಸ್ಥಿತಿಗತಿಯ ಶ್ವೇತಪತ್ರಕ್ಕೆ ಯಡಿಯೂರಪ್ಪ ಒತ್ತಾಯ
ಕರ್ನಾಟಕದ ಆರ್ಥಿಕ ಸ್ಥಿತಿಗತಿಯ ಶ್ವೇತಪತ್ರಕ್ಕೆ ಯಡಿಯೂರಪ್ಪ ಒತ್ತಾಯ
ಕಾಂಗ್ರೆಸ್-ಜೆಡಿಎಸ್ ಬಿಕ್ಕಟ್ಟುಗಳ ಮುಂದೆ ಜನರ ಸಮಸ್ಯೆಗಳು ಅಪ್ರಸ್ತುತ
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಲ್ಲಿ ಯಾವುದೇ ಅನುದಾನಗಳು ಬಿಡುಗಡೆಯಾಗಿಲ್ಲ . ಈ ಸರಕಾರದಲ್ಲಿ ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆಯ ಸಮಸ್ಯೆಗಳತ್ತ ಮಾತ್ರ ಯೋಚಿಸಲಾಗುತ್ತಿದೆ. ರಾಜ್ಯದ ಜನರ ಸಂಕಟಗಳನ್ನು ನೀಗಿಸುವತ್ತ ಗಮನ ಹರಿಸಿಲ್ಲ ಎಂದರು.
ಯಡಿಯೂರಪ್ಪ ನವರೊಂದಿಗೆ ಬಿಜೆಪಿ ಪಕ್ಷದ ಹಿರಿಯ ನಾಯಕ ರಾಮಚಂದ್ರಗೌಡ, ರಾಜ್ಯ ಸರಕಾರದ ಮೇಲೆ ಆರೋಪಗಳ ಮಳೆ ಸುರಿಸಿದರು. ಎಲ್ಲಾ ರಂಗದಲ್ಲೂ , ವಿಶೇಷವಾಗಿ ವೃತ್ತಿ ಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಸರಕಾರ ವಿಫಲವಾಗಿದೆ ಎಂದು ದೂರಿದರು.
ಸರಕಾರ ಶೇ 60 ರಷ್ಟು ಸೀಟುಗಳ ಪ್ರವೇಶ ಶುಲ್ಕಕ್ಕೆ ರಿಯಾಯಿತಿ ಒದಗಿಸಬೇಕು. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕಕ್ಕೆ ಒತ್ತಾಯಿಸದಂತೆ, ಸರಕಾರ ನೆರವಾಗಿ ಈ ಬಿಕ್ಕಟ್ಟನ್ನು ಬಗೆಹರಿಸಬೇಕು. ನ್ಯಾಯಮೂರ್ತಿ ಮುರುಗೋಡು ಸಮಿತಿ ಶಿಫಾರಸ್ಸಿನಂತೆ ಶುಲ್ಕಗಳನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications