ರಾಷ್ಟ್ರದ ಹೆಮ್ಮೆಯ ಅಣುವಿಜ್ಞಾನಿ ಪದ್ಮಭೂಷಣ ರಾಜಾರಾಮಣ್ಣ ಇನ್ನಿಲ್ಲ
ರಾಷ್ಟ್ರದ ಹೆಮ್ಮೆಯ ಅಣುವಿಜ್ಞಾನಿ ಪದ್ಮಭೂಷಣ ರಾಜಾರಾಮಣ್ಣ ಇನ್ನಿಲ್ಲ
ಭಾರತಕ್ಕೆ ಬಲ ನೀಡಿದ ಪೋಖ್ರಾನ್ ಅಣುಪರೀಕ್ಷೆಯ ದಿಗ್ಗಜ ಅಸ್ತಂಗತ
ಸಣ್ಣಕರುಳಿನ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಭಾರತೀಯ ಅಣ್ವಸ್ತ್ರ ಕಾರ್ಯಕ್ರಮದಲ್ಲಿ ಪ್ರಮುಖರಾಗಿದ್ದ ಡಾ. ರಾಜಾರಾಮಣ್ಣ , 1974 ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ನಡೆಸಿದ ಪೋಖ್ರಾನ್ ಅಣ್ವಸ್ರ ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಜಾರಾಮಣ್ಣ ಅವರು ರಾಜ್ಯಸಭಾ ಸದಸ್ಯರಾಗಿ, ಅಲ್ಲದೇ ಕೇಂದ್ರ ಸಚಿವರಾಗಿ ಸಹಾ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ನಿರ್ದೇಶಕರಾಗಿದ್ದರು. ರಾಜಾರಾಮಣ್ಣ ನವರ ಸೇವೆಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಸಂದಿದ್ದವು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications