ಉಡುಪಿ : ಮತದಾರರ ಪಟ್ಟಿಯಿಂದ ಶಾಸಕ ಬಾಲಕೃಷ್ಣ ಹೆಸರಿಗೆ ಖೊಕ್‌

ಉಡುಪಿ : ಮತದಾರರ ಪಟ್ಟಿಯಿಂದ ಶಾಸಕ ಬಾಲಕೃಷ್ಣ ಹೆಸರಿಗೆ ಖೊಕ್‌
ಬಾಲಕೃಷ್ಣಭಟ್‌ ಉಡುಪಿ ವಿಧಾನಸಭಾ ಕ್ಷೇತ್ರದ ಶಾಶ್ವತ ನಿವಾಸಿಯಲ್ಲ ...

ಉಡುಪಿ: ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಬಾಲಕೃಷ್ಣ ಭಟ್‌ರ ಹೆಸರನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಶಾಸಕ ಬಾಲಕೃಷ್ಣ ಭಟ್‌ರ ಹೆಸರನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಜಿಲ್ಲಾಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿಯೂ ಆಗಿರುವ ಮದನ್‌ ಜಿ.ನಾಯಕ್‌ ಸೆ.21ರಂದು ಆದೇಶ ಹೊರಡಿಸಿದ್ದಾರೆ. ಭಾಸ್ಕರ್‌ರಾವ್‌ ಕಿದಿಯೂರು ಎನ್ನುವವರು ಸೆ.9ರಂದು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪರಿಶೀಲಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮದನ್‌ ನಾಯಕ್‌ ತಿಳಿಸಿದ್ದಾರೆ.

ಭಾಸ್ಕರ್‌ರಾವ್‌ ಅವರ ಅರ್ಜಿಯ ಬಗ್ಗೆ ವಿವರವಾದ ಪರಿಶೀಲನೆ ನಡೆಸಲಾಗಿದೆ. ಶಾಸಕ ಬಾಲಕೃಷ್ಣಭಟ್‌ ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಶ್ವತ ನಿವಾಸಿಯಲ್ಲ . ಅವರು ಸುರತ್ಕಲ್‌ ಸಮೀಪದ ಇದ್ಯ ನಿವಾಸಿ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಆ ಕಾರಣದಿಂದಾಗಿ ಅವರ ಹೆಸರನ್ನು ಉಡುಪಿ ಕ್ಷೇತ್ರದ ಮತಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮದನ್‌ ನಾಯಕ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+