ಕುವೆಂಪು ಮರೆತ ಕುರ್ಚಿ ರಾಜಕಾರಣದ ಧರ್ಮ ಸರ್ಕಾರ -ದೇಜಗೌ
ಕುವೆಂಪು ಮರೆತ ಕುರ್ಚಿ ರಾಜಕಾರಣದ ಧರ್ಮ ಸರ್ಕಾರ -ದೇಜಗೌ
ಗಾಂಧೀಜಿ ಏರಿದ ಎತ್ತರಕ್ಕೆ ಮುಟ್ಟಿದ ಕುವೆಂಪು
ರಾಜಕೀಯ ಜಂಜಾಟದ ನಡುವೆ ಸರ್ಕಾರ ಕುವೆಂಪು ಅವರನ್ನು ಮರೆತಿದೆ. ಕುವೆಂಪು ಶತಮಾನೋತ್ಸವ ಕಾರ್ಯಕ್ರಮಗಳು ನೆನೆಗುದಿಗೆ ಬಿದ್ದಿವೆ. ಕುವೆಂಪು ಸಾಹಿತ್ಯದ ಪ್ರಚಾರ ಹಾಗೂ ಅಧ್ಯಯನ ಸಂಸ್ಥೆ ಸ್ಥಾಪನೆಗೆ ಸರ್ಕಾರ ಪ್ರಯತ್ನ ನಡೆಸುತ್ತಿಲ್ಲ ಎಂದು ದೇಜಗೌ ದೂರಿದರು. ಮೈಸೂರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವೊಂದರ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಿಂದಿನ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ಪ್ರಾರಂಭವಾದ ಕುವೆಂಪು ಶತಮಾನೋತ್ಸವ ಕಾರ್ಯಕ್ರಮಗಳನ್ನು ಧರಂ ಸರ್ಕಾರ ಮುಂದುವರಿಸಬೇಕು ಎಂದು ದೇಜಗೌ ಆಗ್ರಹಿಸಿದರು.
ಕುವೆಂಪು ಸಾಹಿತ್ಯದಲ್ಲಿ ಸಮಸ್ತ ವಿಶ್ವದ ಪರಿಕಲ್ಪನೆಯಿದ್ದು , ಅವರನ್ನು ಗಾಂಧೀಜಿಯ ಎತ್ತರಕ್ಕೆ ಹೋಲಿಸಿದರೆ ತಪ್ಪಾಗಲಾರದು ಎಂದು ದೇಜಗೌ ಅಭಿಪ್ರಾಯಪಟ್ಟರು.
ಗಾಂಧೀಜಿಗೆ ಜಾತಿವಾದಿ ಪಟ್ಟ ಕಟ್ಟುವ ಕೆಲವರು ಯತ್ನಿಸುತ್ತಿದ್ದಾರೆ. ಆದರೆ ಅಂಬೇಡ್ಕರ್‌ಗಿಂತ ಮುಂಚೆಯೇ ಅಸ್ಪೃಶ್ಯತೆಯನ್ನು ತೊಡೆದುಹಾಕಲು ಗಾಂಧೀಜಿ ಪ್ರಯತ್ನಿಸಿದ್ದರು ಎಂದು ದೇಜಗೌ ಹೇಳಿದರು.
(ಇನ್ಫೋ ವಾರ್ತೆ)
ಗಾಂಧೀಜಿ ಜೊತೆ ಕುವೆಂಪು ಹೋಲಿಕೆ ಸರಿಯಾ ?
ಮುಖಪುಟ / ವಾರ್ತೆಗಳು












Click it and Unblock the Notifications