ಜೆಡಿಎಸ್‌ಗೆ ಬಿಜೆಪಿಗಿಂತಲೂ ಕಾಂಗ್ರೆಸ್‌ ಪಕ್ಷವೇ ದೊಡ್ಡ ಶತ್ರು; ತಿಪ್ಪಣ್ಣ

ಜೆಡಿಎಸ್‌ಗೆ ಬಿಜೆಪಿಗಿಂತಲೂ ಕಾಂಗ್ರೆಸ್‌ ಪಕ್ಷವೇ ದೊಡ್ಡ ಶತ್ರು; ತಿಪ್ಪಣ್ಣ
ಬೀದರ್‌ಲೋಕಸಭೆ ಮರು ಚುನಾವಣೆಯಲ್ಲಿ ಮುರಿದು ಬಿದ್ದ ಮೈತ್ರಿಕೂಟ

ಬೆಂಗಳೂರು : ರಾಜ್ಯದಲ್ಲಿ ಬೀದರ್‌ ಲೋಕಸಭೆ ಚುನಾವಣೆಯು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ನಡುವೆ ಭಿನ್ನಾಭಿಪ್ರಾಯಕ್ಕೆ ಆಸ್ಪದ ನೀಡಿದೆ.

ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಬೀದರ್‌ನಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ. ಸರಕಾರದಲ್ಲಿ ಪಾಲ್ಗೊಂ ಡ ಮಾತ್ರಕ್ಕೆ ಪಕ್ಷದ ಹಿತವನ್ನು ಬಲಿಕೊಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ತಿಳಿಸಿ ದ್ದಾರೆ.

ಜೆಡಿಎಸ್‌ ರಾಜ್ಯಾಧ್ಯಕ್ಷ ಎನ್‌.ತಿಪ್ಪಣ್ಣ , ಈ ಲೋಕಸಭೆ ಮರುಚುನಾವಣೆಯಲ್ಲಿ ಜೆಡಿಎಸ್‌ಗೆ ಬಿಜೆಪಿಗಿಂತಲೂ ಕಾಂಗ್ರೆ ಸ್‌ ಪಕ್ಷವೇ ದೊಡ್ಡ ಶತ್ರು. ಅನಿವಾರ್ಯ ಸ್ಥಿತಿ ಬಂದರೆ, ನಮ್ಮ ಕಾರ್ಯಕರ್ತರು ಬಿಜೆಪಿಗೆ ಮತ ಹಾಕುತ್ತಾರೆಯೇ ಹೊರತು, ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ ಮಾಜಿ ಸಂಸದ ಸಿಂಗರಾವ್‌ ಸೂರ್ಯವಂಶಿಯನ್ನು ಕಣಕ್ಕಿಳಿಸಿದೆ. ಬಿಜೆಪಿ ಹಿಂದೆ ಈ ಕ್ಷೇತ್ರ ಪ್ರತಿನಿಧಿಸಿದ್ದ ರಾಮಚಂದ್ರ ವೀರಪ್ಪ ಅವರ ಪುತ್ರ ಬಸವರಾಜ್‌ ಆರ್ಯರನ್ನು ಹುರಿಯಾಳಾಗಿಸಲು ಯೋಚಿಸುತ್ತಿದೆ.

ಕಾಂಗ್ರೆಸ್‌- ಜೆಡಿಎಸ್‌ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಬಿಜೆಪಿಯಿಂದ ಬೀದರ್‌ ಕ್ಷೇತ್ರವನ್ನು ಕಸಿಯಲು, ಎಐಸಿ ಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಜೆಡಿಎಸ್‌ ನಾಯಕ ದೇವೇಗೌಡರ ನಡುವಿನ ಮಾತುಕತೆಗಳು ಫಲಕಾರಿ ಯಾಗಿಲ್ಲ.

ಆದರೂ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಾಗಿಲಿನ್ನೂ ಮುಚ್ಚಿಲ್ಲ. ಈ ಬಗೆಗೆ ಸಂಧಾನ ಪ್ರಕ್ರಿಯೆಗಳು ಮುಗಿ ದಿಲ್ಲ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಆಶಾಭಾವವನ್ನು ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+