ಉಮಾಯಣದಲ್ಲಿ ಧ್ವಜಮಹಾತ್ಮೆ ಸೆಕೆಂಡ್ ಇನ್ನಿಂಗ್ಸ್‌ಗೆ ಮೈದಾನ ಸಜ್ಜು
ಉಮಾಯಣದಲ್ಲಿ ಧ್ವಜಮಹಾತ್ಮೆ ಸೆಕೆಂಡ್ ಇನ್ನಿಂಗ್ಸ್‌ಗೆ ಮೈದಾನ ಸಜ್ಜು
ಅ.14:ನ್ಯಾಯಲಯಕ್ಕೆ ಹಾಜರಾಗುವಂತೆ ಉಮಾಭಾರತಿಗೆ ನೋಟಿಸ್
ಕೋಮು ಸೌಹಾರ್ದತಾ ವೇದಿಕೆ ಸಲ್ಲಿಸಿರುವ ಮೇಲ್ಮನವಿಯನ್ನು ಸ್ವೀಕರಿಸಿ, ವಿಚಾರಣೆಗಾಗಿ ನ್ಯಾಯಾಲಯವು ಉಮಾ ಭಾರತಿ ಸೇರಿದಂತೆ 17ಮಂದಿಗೆ ಹಾಗೂ ರಾಜ್ಯಸರಕಾರಕ್ಕೆ ನೋಟೀಸ್ ಜಾರಿಮಾಡಿದೆ.
ಹಿನ್ನೆಲೆ : 1994 ಆಗಸ್ಟ್ 15 ರಂದು ಈದ್ಗಾ ಮೈದಾನದ ಧ್ವಜಾರೋಹಣ ಪ್ರಕರಣದ ಹಿನ್ನೆಲೆ ಉಮಾಭಾರತಿ ಮತ್ತಿತರರ ಮೇಲೆ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ವಜಾಗೊಳಿಸುವುದನ್ನು ಪ್ರಶ್ನಿಸಿ, ಸೆ.6 ರಂದು ಕೋಮು ಸೌಹಾರ್ದತಾ ವೇದಿಕೆಯ ಸದಸ್ಯರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿ, ಉಮಾಭಾರತಿಯನ್ನು ನ್ಯಾಯಾಲಯ ಆರೋಪಮುಕ್ತರೆಂದು ಘೋಷಿಸಿತ್ತು.
ಸೆ.17 ರಂದು ಜೆಎಂಎಫ್‌ಸಿ ನ್ಯಾಯಾಲಯದ ತೀರ್ಪಿನ ವಿರುದ್ಧ ವೇದಿಕೆಯ ಸದಸ್ಯರು, ಜಿಲ್ಲಾ ಸೆಷನ್ಸ್ ನ್ಯಾಯಾಲಯ ದಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಅಂಗೀಕರಿಸಿದೆ.
ಕಾನೂನು ದೃ ಷ್ಠಿಯಲ್ಲಿ ಎಲ್ಲರೂ ಸಮಾನರು. ಧ್ವಜಾರೋಹಣದ ನೆಪದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಸಮಾಜ ದ ಶಾಂತಿಗೆ ಭಂಗ ತಂದಿದ್ದ, ಉಮಾಭಾರತಿ ವಿರುದ್ದದ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯದಂತೆ ಪತ್ರಕರ್ತೆ ಗೌರಿ ಲಂಕೇಶ್ ಮತ್ತಿತರರು ಒತ್ತಾಯಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications