ಮೂಲಭೂತ ಸೌಕರ್ಯಗಳಿಲ್ಲದೆ ಹೈಕೋರ್ಟ್ ಪೀಠ ಕೇಳಿದರೆ ಹೇಗೆ?
ಮೂಲಭೂತ ಸೌಕರ್ಯಗಳಿಲ್ಲದೆ ಹೈಕೋರ್ಟ್ ಪೀಠ ಕೇಳಿದರೆ ಹೇಗೆ?
ಮುಖ್ಯಮಂತ್ರಿ ಧರ್ಮಸಿಂಗ್ ಮನವಿಗೆ ನ್ಯಾಯಮೂರ್ತಿ ಜೈನ್ ಸಕಾರಾತ್ಮಕ ಭರವಸೆ
ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ ಸರ್ವಪಕ್ಷಗಳು ಹಾಗೂ ವಕೀಲರ ಮುಖಂಡರ ನಿಯೋಗಕ್ಕೆ ಮುಖ್ಯನ್ಯಾಯಮೂರ್ತಿಗಳು ಈ ಭರವಸೆ ನೀಡಿದ್ದಾರೆ.
ಸರಕಾರದ ದ್ವಂದ್ವ ಧೋರಣೆ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಪೀಠ ಸ್ಥಾಪನೆಗೆ ತಕ್ಷಣ ಈ ಸಂದರ್ಭದಲ್ಲಿ ಅನುಮತಿ ನೀಡಲು ನನ್ನ ಅಭ್ಯಂತರವೇನಿಲ್ಲ. ಆದರೆ ಮೂಲಭೂತ ಸೌಕರ್ಯಗಳಿಲ್ಲದೇ ತಾತ್ಕಲಿಕ ವ್ಯವಸ್ಥೆಯಲ್ಲಿ ಪೀಠ ಕಾರ್ಯನಿರ್ವಹಿಸಬಾರದು. ಕೇವಲ ಹೇಳಿಕೆಗಳ ಆಧಾರದ ಮೇಲೆ ಈ ಬಗೆಗೆ ನಿರ್ಧಾರ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಗತ್ಯ ಸೌಲಭ್ಯ ಕಲ್ಪಿಸಲು ಸರಕಾರ ಬದ್ಧವಾಗಿದೆ. ಕೂಡಲೇ ಎರಡು ಸಂಚಾರಿ ಪೀಠ ಸ್ಥಾಪನೆಗೆ ಅನುಮತಿ ನೀಡಿ ಎನ್ನುವ ಮುಖ್ಯಮಂತ್ರಿಗಳ ಬೇಡಿಕೆಗೆ ಸ್ಪಂದಿಸುವ ಭರವಸೆಯನ್ನು ಎನ್.ಕೆ.ಜೈನ್ ನೀಡಿದ್ದಾರೆ. ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಚೆಂಡು ಈಗ ರಾಜ್ಯ ಸರಕಾರದ ಅಂಗಳದಲ್ಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications