ಶಂಕರ ಮುನವಳ್ಳಿ ಬಂಧಿಸಿ, ನ್ಯಾಯಾಂಗ ತನಿಖೆ ನಡೆಸಿ -ಯಡಿಯೂರಪ್ಪ

ಶಂಕರ ಮುನವಳ್ಳಿ ಬಂಧಿಸಿ, ನ್ಯಾಯಾಂಗ ತನಿಖೆ ನಡೆಸಿ -ಯಡಿಯೂರಪ್ಪ
ಮಹಾರಾಷ್ಟ್ರ ಬಿಜೆಪಿಗೆ ಮಸಿ ಬಳಿಯಲು ಮುನವಳ್ಳಿ ಪಿತೂರಿ.

ಬೆಂಗಳೂರು : ಬಿಜೆಪಿ ಮೇಲೆ ಗೂಬೆಕೂರಿಸುವ ಉದ್ದೇಶದಿಂದ ಕ್ರಾಂಗೆಸ್ಸಿನ ಶಂಕರ ಮುನವಳ್ಳಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಶಂಕರ ಮುನವಳ್ಳಿ ನಾಟಕ ಸೃಷ್ಟಿಸಿದ್ದು , ಮಹಾರಾಷ್ಟ್ರ ಬಿಜೆಪಿ ವಿರುದ್ದ ಅಪಪ್ರಚಾರ ನಡೆಸಿದ್ದಾರೆ.ಆದ್ದರಿಂದ ಸತ್ಯಾಂಶ ಕಂಡು ಹಿಡಿಯುವ ಉದ್ದೇಶದಿಂದ ನ್ಯಾಯಾಂಗ ತನಿಖೆ ಅನಿವಾರ್ಯವಾಗಿದೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಶಂಕರ ಮುನವಳ್ಳಿಯಿಂದ ಪ್ರೇರಿತನಾಗಿ ಈ ಕೃತ್ಯ ಎಸಗಿರುವುದಾಗಿ ಯುವಕನೊಬ್ಬ ನೀಡಿರುವ ಹೇಳಿಕೆಯ ವೀಡಿಯೋ ಟೇಪ್‌ ಅನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಅವರು ಈ ಎಲ್ಲಾ ದಾಖಲೆಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ಎಂದರು. ಮುನವಳ್ಳಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.

ಹುಬ್ಬಳ್ಳಿ ನ್ಯಾಯಾಲಯಕ್ಕೆ ಶರಣಾಗಲು ಉಮಾಭಾರತಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾಗ, ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹೊದ್ದು ಮಲಗಿದ್ದರು ಹಾಗೂ ಧ್ವಜದ ಹಾಸಿನ ಮೇಲೆ ಜೂಜಾಡುತ್ತಿದ್ದರು ಎಂದು ಆರೋಪಿಸಿದ್ದ ಮುನವಳ್ಳಿ, ಈ ಸಂಬಂಧ ಛಾಯಾಚಿತ್ರಗಳನ್ನೂ ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದರು. ಆದರೆ, ಮುನವಳ್ಳಿ ಅವರ ಆಮಿಷದಿಂದಾಗಿ ನಶೆಯಲ್ಲಿದ್ದ ತಾವು ಆ ರೀತಿ ವರ್ತಿಸಿದ್ದಾಗಿ ಚಿತ್ರಗಳಲ್ಲಿನ ಯುವಕರು ಆನಂತರ ತಪ್ಪೊಪ್ಪಿಗೆ ನೀಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+