ಹೈಕೋರ್ಟ್‌ ಪೀಠಕ್ಕಾಗಿ ಸೆ.21ರಂದು ಹೈದ್ರಾಬಾದ್‌ ಕರ್ನಾಟಕಬಂದ್‌

ಹೈಕೋರ್ಟ್‌ ಪೀಠಕ್ಕಾಗಿ ಸೆ.21ರಂದು ಹೈದ್ರಾಬಾದ್‌ ಕರ್ನಾಟಕಬಂದ್‌
ರಾಯಚೂರು, ಗುಲ್ಪರ್ಗ, ಬೀದರ್‌, ಜಿಲ್ಲೆಗಳಲ್ಲಿ ಬಂದ್‌ಗೆ ವಕೀಲರ ಕರೆ

ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಒತ್ತಾಯಿಸಿ ಸೆ.21 ರಂದು ಹೈದ್ರಾಬಾದ್‌ ಕರ್ನಾಟಕ ವ್ಯಾಪ್ತಿಯ ರಾಯಚೂರು, ಗುಲ್ಪರ್ಗ, ಬೀದರ್‌, ಜಿಲ್ಲೆಗಳಲ್ಲಿ ಬಂದ್‌ ಆಚರಿಸಲು ವಕೀಲರು ನಿರ್ಧರಿಸಿದ್ದಾರೆ.

ಸೆ.15 ರಂದು ಮುಖ್ಯಮಂತ್ರಿ ಧರ್ಮಸಿಂಗ್‌ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗ ಹಾಗೂ ಈ ಭಾಗದ ಪ್ರಮುಖರು ತೆರಳಿ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ, ಮತ್ತೊಮ್ಮೆ ಮನವೊಲಿಸುವರು. ಸೆ.23 ರವರೆಗೆ ಈ ಭಾಗದಲ್ಲಿ ಕೋರ್ಟ್‌ ಕಲಾಪಗಳ ಬಹಿಷ್ಕಾರ ಮುಂದುವರೆಯಲಿದೆ. ರಾಷ್ಟ್ರಪತಿ ಅಬ್ದುಲ್‌ ಕಲಾಂ ರನ್ನು ಭೇಟಿಮಾಡಿ ಮನವಿ ಸಲ್ಲಿಸುವುದಾಗಿ ವಕೀಲರ ಸಂಘಗಳು ತಿಳಿಸಿವೆ.

ಕಳೆದ ಮೂರು ದಶಕಗಳ ಹೈಕೋರ್ಟ್‌ ಪೀಠದ ಹೋರಾಟ ಮುಂದುವರೆದಿದೆ. ಪೀಠದ ಚಳವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸುವ ಚಳವಳಿಯಾಗಿ ಸಹಾ ಬೆಳೆಯುತ್ತಿದೆ. ಹೈದರಾಬಾದ್‌ ನಿಜಾಮರ ಕಾಲದಲ್ಲಿ ಕೇವಲ 100 ಕಿ.ಮೀ ಅಂತರದ ಹೈದರಾಬಾದ್‌ನಲ್ಲಿ ನ್ಯಾಯ ಪಡೆಯುತ್ತಿದ್ದೆವು. ಈಗ ಹೈಕೋರ್ಟ್‌ ಪೀಠದಿಂದ 800 ಕಿ.ಮೀ ದೂರ ಉಳಿದಿದ್ದೇವೆ ಎನ್ನುವ ನೋವು ಈ ಭಾಗದ ಜನರಲ್ಲಿದೆ. ನ್ಯಾಯಾಂಗ ಕಲಾಪಗಳ ಬಹಿಷ್ಕಾರದಿಂದ ಕಕ್ಷಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+