ಶಿಲಾಕಾವ್ಯದ ತವರು ಹಂಪಿಯಲ್ಲಿ ಅ.10 ರಿಂದ ಚಿತ್ರಕಲಾವಿದರ ಶಿಬಿರ
ಶಿಲಾಕಾವ್ಯದ ತವರು ಹಂಪಿಯಲ್ಲಿ ಅ.10 ರಿಂದ ಚಿತ್ರಕಲಾವಿದರ ಶಿಬಿರ
ರಾಷ್ಟ್ರೀಯ ಕಲಾವಿದರ ಕುಂಚದಲ್ಲಿ ಹಂಪಿ ವೈಭವದ ಸೆರೆ
ಹಂಪಿಯ ಚಿತ್ರ ಕಲಾವಿದರ ಶಿಬಿರದಲ್ಲಿ ಕಲಾವಿದರು ತಮ್ಮ ಕಣ್ಣಲ್ಲಿ ಕಾಣುವ ಹಂಪಿಯ ಸೊಬಗನ್ನು ಕುಂಚದ ಮೂಲಕ ಕ್ಯಾನ್ವಾಸ್‌ಗೆ ಇಳಿಸಲಿದ್ದು, ಈ ಶಿಬಿರ ಕರ್ನಾಟಕದ ವೈಭವವನ್ನು ಸಾರಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಮಹೇಂದ್ರ ಜೈನ್ ಸುದ್ದಿಗಾರರಿಗೆ ತಿಳಿಸಿದರು.
ಕಲಾವಿದರನ್ನು ಹಂಪಿಯ ಸಮೀಪದಲ್ಲಿರುವ ಐಹೊಳೆ, ಪಟ್ಟದಕಲ್ಲು, ಲಕ್ಕುಂಡಿ ಮುಂತಾದ ಪ್ರವಾಸಿಧಾಮಗಳಿಗೆ ಕರೆದೊಯ್ಯಲಾಗುವುದು. ಇಲ್ಲಿನ ವಾತಾವರಣವು ಕಲಾವಿದರ ಸೃಜನಶೀಲತೆಯನ್ನು ಇನ್ನಷ್ಟು ಉತ್ತೇಜಿಸಲಿದೆ ಎಂದು ಜೈನ್ ತಿಳಿಸಿದರು.
ಕಲಾವಿದರ ಶಿಬಿರಕ್ಕೆ 20ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಇದೆ . ಕಲಾವಿದರ ಸೃಜನಶೀಲ ಕಲಾಕೃತಿಗಳನ್ನು ಹಂಪಿಯ ವೈಭವದ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದೆಂದು ಜೈನ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications