ದೇಶದಲ್ಲಿ ಉನ್ನತದರ್ಜೆ ಕುಸುರಿ ಕೆಲಸಗಾರರ ಕೊರತೆ: ಕಿರಣ್ ಕಾರ್ನಿಕ್
ದೇಶದಲ್ಲಿ ಉನ್ನತದರ್ಜೆ ಕುಸುರಿ ಕೆಲಸಗಾರರ ಕೊರತೆ: ಕಿರಣ್ ಕಾರ್ನಿಕ್
ಸವಲತ್ತು ಹೆಚ್ಚಿಸಲು, ಪಠ್ಯಕ್ರಮ ಬದಲಿಸಲು ವಿವಿಗಳಿಗೆ ನಾಸ್‌ಕಾಂ ಆಗ್ರಹ
ಬಿಪಿಒ ಇಂಡಸ್ಟ್ರಿಗೆ ನೇಮಕಗೊಳ್ಳುವ ಪ್ರತಿ ನೂರು ಮಂದಿಯಲ್ಲಿ ಕೇವಲ 7 ಅಥವಾ 8 ಮಂದಿ ಮಾತ್ರ ಉತ್ತಮ ಪರಿಣಿತರಾಗಿರುತ್ತಾರೆ. ಪ್ರತಿವರ್ಷ ದೇಶದಲ್ಲಿ ಸುಮಾರು 5000 ಪಿಎಚ್‌ಡಿಗಳು ಹೊರಬೀಳುತ್ತಿದ್ದಾರೆ. ಸ್ಪರ್ಧಾತಕ ಪೇಟೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಆದರೆ ಉತ್ತಮ ಕೆಲಸಗಾರರು ಮಾತ್ರ ಅಗತ್ಯ ಸಂಖ್ಯೆಯಲ್ಲಿ ದೊರೆಯುತ್ತಿಲ್ಲ ಎಂದು ಕಿರಣ್ ಕಾರ್ನಿಕ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರತಿವರ್ಷ 3.5 ಲಕ್ಷ ಇಂಜಿನಿಯರ್‌ಗಳು ವಿಶ್ವವಿದ್ಯಾಲಯಗಳಿಂದ ಹೊರಬೀಳುತ್ತಿದ್ದಾರೆ. ಆದರೆ ಅವರಲ್ಲಿ ಮಾಸ್ಟರ್‌ಗಳು ಹಾಗೂ ಡಾಕ್ಟರೇಟ್‌ಗಳಾಗುವುದು ತೀರಾ ಕಡಿಮೆ,. ಕೇವಲ 5 ಸಾವಿರ ವಿದ್ಯಾರ್ಥಿಗಳು ಮಾತ್ರ ಪಿಎಚ್‌ಡಿ ಪಡೆಯುತ್ತಿದ್ದಾರೆ ಎಂದು ಕಿರಣ್ ಕಾರ್ನಿಕ್ ಅಂಕಿಅಂಶ ನೀಡಿದರು.
ಪ್ರಸ್ತುತ ಸಾಗುತ್ತಿರುವ ಬಿಪಿಒ ವೇಗಕ್ಕೆ ಪರಿಣಿತರ ಸಂಖ್ಯೆ ಏನೇನೂ ಹೊಂದುತ್ತಿಲ್ಲ . ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಪರಿಣಿತ ಕೆಲಸಗಾರರ ಕೊರತೆ ಕಾಡಲಿದೆ. ಆದುದರಿಂದ ಸವಲತ್ತುಗಳು ಹಾಗೂ ಪಠ್ಯಕ್ರಮವನ್ನು ಸುಧಾರಿಸುವಂತೆ ವಿಶ್ವವಿದ್ಯಾಲಯಗಳೊಂದಿಗೆ ನಾಸ್‌ಕಾಂ ಮಾತುಕತೆ ಪ್ರಯತ್ನ ಶುರು ಮಾಡಿದೆ. ಬೆಂಗಳೂರು ಹಾಗೂ ಹೈದರಾಬಾದ್‌ಗಳಲ್ಲಿನ ಮಾಹಿತಿ ತಂತ್ರಜ್ಞಾನ ಭಾರತೀಯ ಸಂಸ್ಥೆಗಳ ಮಾದರಿ ಅನುಸರಿಸುವಂತೆ ವಿವಿಗಳನ್ನು ಕೇಳಲಾಗುವುದು ಎಂದು ಕಿರಣ್ ಕಾರ್ನಿಕ್ ಹೇಳಿದರು.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications