ಸಂಪುಟ ವಿಸ್ತರಣೆ ತಡ: ದೇವೇಗೌಡರು ಬೇಜಾರು ಮಾಡಿಕೊಂಡಿದ್ದಾರೆ
ಸಂಪುಟ ವಿಸ್ತರಣೆ ತಡ: ದೇವೇಗೌಡರು ಬೇಜಾರು ಮಾಡಿಕೊಂಡಿದ್ದಾರೆ
ವರಿಷ್ಟರೊಂದಿಗೆ ಸಂಪುಟ ವಿಸ್ತರಣೆ ಬಗೆಗೆ ಮಾತನಾಡುವ ಹಾದಿಯಲ್ಲಿ ಧರ್ಮಸಿಂಗ್
ಸುದ್ದಿ ವಾಹಿನಿಯಾಂದರ ಜೊತೆ ಭಾನುವಾರ (ಸೆ.12) ಮಾತನಾಡಿದ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಕುರಿತು ತಮ್ಮ ಅತೃಪ್ತಿ ಹೊರಹಾಕಿದರು. ಸಂಪುಟ ವಿಸ್ತರಣೆ ಕುರಿತಂತೆ ಕಾಂಗ್ರೆಸ್ ವರಿಷ್ಠರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಧರ್ಮಸಿಂಗ್ ನವದೆಹಲಿಗೆ ತೆರಳುತ್ತಿರುವ ಸಂದರ್ಭದಲ್ಲೇ ದೇವೇಗೌಡ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅನೇಕ ಖಾತೆಗಳನ್ನು ಓರ್ವ ವ್ಯಕ್ತಿಯೇ ತುಂಬಾ ದಿನಗಳ ಕಾಲ ಹೊಂದಿರುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟ ದೇವೇಗೌಡ, ಮಂತ್ರಿಮಂಡಲ ವಿಸ್ತರಣೆ ಕುರಿತಂತೆ ತಾವು ದೆಹಲಿಯಲ್ಲಿ ಯಾರನ್ನೂ ಭೇಟಿಯಾಗಿಲ್ಲ ಎಂದರು.
ಮಂತ್ರಿ ಮಂಡಲ ವಿಸ್ತರಣೆ ಕುರಿತಂತೆ ದೇವೇಗೌಡ ಹಾಗೂ ಧರ್ಮಸಿಂಗ್ ಈಗಾಗಲೇ ಅನೇಕ ಸುತ್ತಿನ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಎ.ಕೃಷ್ಣಪ್ಪ ಹಾಗೂ ರೋಷನ್‌ಬೇಗ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗೆಗೆ ದೇವೇಗೌಡ ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications