ಚಿತ್ರದುರ್ಗದ ‘ಸಂತೆಹೊಂಡ’ದಲ್ಲಿ 5 ವರ್ಷದ ನಂತರ ಗಂಗಮ್ಮ ನಕ್ಕಳು

ಚಿತ್ರದುರ್ಗದ ‘ಸಂತೆಹೊಂಡ’ದಲ್ಲಿ 5 ವರ್ಷದ ನಂತರ ಗಂಗಮ್ಮ ನಕ್ಕಳು
ಕೋಟೆಯ ಸಾಲು ಹೊಂಡಗಳೆಲ್ಲ ಭರ್ತಿ....

  • ದಟ್ಸ್‌ಕನ್ನಡ ಬ್ಯೂರೊ
ಚಿತ್ರದುರ್ಗ : ಇಲ್ಲಿನ ಇತಿಹಾಸ ಪ್ರಸಿದ್ಧ ಸಂತೆಹೊಂಡದಲ್ಲೀಗ ಗಂಗಾವತರಣ. ಸರಿಸುಮಾರು ಐದು ವರ್ಷಗಳಿಂದ ನೀರಿನ ಪಸೆ ಇಂಗಿಸಿಕೊಂಡು ಪೂರ್ಣ ಬೆತ್ತಲಾಗಿದ್ದ ಸಂತೆಹೊಂಡದಲ್ಲೀಗ ನೀರಿನ ಕಲಕಲ.

ಕನ್ನಂಬಾಡಿ, ತುಂಗಭದ್ರೆ, ಆಲಮಟ್ಟಿಯಂಥ ಜಲಾಶಯಗಳೇ ತುಂಬಿ ತುಳುಕುವಾಗ ಸಂತೆಹೊಂಡದ್ದೇನು ಮಹಾ ಎನ್ನಬೇಡಿ. ಹಾಗೆಂದು ನೀವು ಭಾವಿಸಿದಲ್ಲಿ ನಿಮಗೆ ಚಿತ್ರದುರ್ಗದ ಪರಿಸರ ಗೊತ್ತಿಲ್ಲವೆಂದೇ ಅರ್ಥ. ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ದುರ್ಗವೂ ಒಂದು ಎನ್ನುವುದು ನಿಮ್ಮ ಗಮನದಲ್ಲಿರಲಿ. ಆ ವಿಷಯ ಬಿಡಿ, ಸಂತೆಹೊಂಡದ ನೀರಿನ ಕಲಕಲ ಕುರಿತು ಮಾತಾಡೋಣ.

ಮುಂಗಾರು ಕೃಪೆ ಚೆನ್ನಾಗಿದ್ದರೂ ಸಂತೆಹೊಂಡ ಇನ್ನೂ ತುಂಬಿಲ್ಲ . ಆದರೆ ಸುಮಾರು 25 ಅಡಿ ನೀರು ಹೊಂಡದಲ್ಲಿ ಸಂಗ್ರಹವಾಗಿದ್ದು , ಪಟ್ಟಣದ ನಾಗರಿಕರಲ್ಲಿ ಸಂತಸ ಮೂಡಿಸಿದೆ.

ಸಂತೆಹೊಂಡದ್ದು 310 ವರ್ಷಗಳ ಐತಿಹಾಸ. ಚಿತ್ರದುರ್ಗದ ಪಾಳೇಗಾಕ ಬಿಚ್ಚುಗತ್ತಿ ಭರಮಣ್ಣ ನಾಯಕ 1693ರಲ್ಲಿ ಕಟ್ಟಿಸಿದ ಹೊಂಡವಿದು. ಸೈನ್ಯಕ್ಕೆ ಕುಡಿಯುವ ನೀರು ಒದಗಿಸುತ್ತಿಂತೆ ಈ ಸಂತೆಹೊಂಡ. ಭರಮಣ್ಣ ನಾಯಕ ನೀರಿನ ತಾವು ಕಟ್ಟಿಸುವುದರಲ್ಲಿ ಹೆಸರುವಾಸಿ. ಭರಮಣ್ಣನಷ್ಟೇ ಅಲ್ಲ ದುರ್ಗದ ಪಾಳೇಗಾರರೆಲ್ಲರೂ ಅರವಟ್ಟಿಗೆಯಂ ಇಡಿಸು ಕುಲೀನರೇ. ಸುಮ್ಮನೇ ಕಲ್ಲಿನಕೋಟೆಯಲ್ಲೊಂದು ಸುತ್ತು ಬನ್ನಿ : ಗೋಪಾಲಸ್ವಾಮಿ ಹೊಂಡ, ಅಕ್ಕನ ಹೊಂಡ, ತಂಗಿ ಹೊಂಡ, ತಣ್ಣೀರು ದೊಣಿ, ಸಿಹಿನೀರಿನ ಹೊಂಡ- ಹೀಗೆ ಹೊಂಡಗಳ ಮೆರವಣಿಗೆ. ಹೆಚ್ಚೂಕಮ್ಮಿ ಎಲ್ಲ ಹೊಂಡಗಳೂ ಈಗ ತುಂಬಿವೆ.

ಸಂತೆಹೊಂಡ 80 ಅಡಿಗಳಷ್ಟು ಆಳವಿದೆ. ಈ ಹೊಂಡದ ನಿರ್ಮಾಣಕ್ಕೆ ಗ್ರಾನೈಟ್‌ ಕಲ್ಲುಗಳನ್ನು ಬಳಸಲಾಗಿದೆ ಎನ್ನುತ್ತಾರೆ ತಜ್ಞರು. ಹೊಂಡದ ನೀರಂತೂ ಎಳನೀರು. ಸ್ಪಟಿಕಷ್ಟು ಸ್ಪಷ್ಟ .

ಈ ಇತಿಹಾಸ ಪ್ರಸಿದ್ಧ ಹೊಂಡವೊಮ್ಮೆ ಕಸಕಡ್ಡಿ ಗಲೀಜುಗಳನ್ನು ತುಂಬುವ ಸ್ಥಳವೂ ಆಗಿತ್ತು . ಆದರೆ ಪಟ್ಟಣದ ಕೆಲ ಹಿರೀಕರು ಜಾಗೃತರಾಗಿ, ಹೊಂಡ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಈ ಬಾರಿಯ ಮಳೆಗಾಲದಲ್ಲಿ ಸಂತೆಹೊಂಡ ತುಂಬುವುದೇ ? ಅಂತದೊಂದು ಸಮೃದ್ಧಿಯ ಕನಸು ದುರ್ಗದ ಜನತೆಯ ಕಣ್ಣಲ್ಲಿದೆ.

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+