ತಿರಂಗಾಯಾತ್ರೆಯಿಂದ ರಾಷ್ಟ್ರಧ್ವಜಕ್ಕೆ ಅವಮಾನ : ಪೂಜಾರಿ ಆಕ್ರೋಶ
ತಿರಂಗಾಯಾತ್ರೆಯಿಂದ ರಾಷ್ಟ್ರಧ್ವಜಕ್ಕೆ ಅವಮಾನ : ಪೂಜಾರಿ ಆಕ್ರೋಶ
ಧರ್ಮಸಿಂಗ್‌ರಿಂದ ಸದ್ಯದಲ್ಲಿಯೇ ಸಂಪುಟ ವೃದ್ಧಿ
ಜೆಎಮ್‌ಎಫ್‌ಸಿ ನ್ಯಾಯಾಲಯ ಉಮಾಭಾರತಿಯವರನ್ನು ಹತ್ತು ವರ್ಷ ಹಳೆಯ ವ್ಯಾಜ್ಯೆಯಿಂದ ಖುಲಾಸೆ ಮಾಡಿರುವುದನ್ನು ಮರುಪ್ರಶ್ನಿಸಿ ಅರ್ಜಿಸಲ್ಲಿಸುವುದಾಗಿ ಅವರು ಶನಿವಾರ ಪತ್ರಕರ್ತರನ್ನು ಭೇಟಿ ಮಾಡಿ ತಿಳಿಸಿದರು.
ಕಾಂಗ್ರೆ-ಸ್-ಜೆಡಿಎಸ್ ಸರ್ಕಾರ ಕೆಳನ್ಯಾಯಾಲಯದ ನಿರ್ಣಯವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸದಿದ್ದರೆ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್‌ವರೆಗೂ ಹೋಗಿ ಹೋರಾಟ ನಡೆಸಲು ಸಿದ್ಧವಿದೆ ಎಂದು ಪೂಜಾರಿ ಸ್ಪಷ್ಟಪಡಿಸಿದರು.
ಸಂಪುಟ ವೃದ್ಧಿ : ಮುಖ್ಯಮಂತ್ರಿ ಧರ್ಮಸಿಂಗ್ ಅವರು ಸದ್ಯದಲ್ಲಿಯೇ ಸಂಪುಟವನ್ನು ಹೆಚ್ಚಿಸಲಿದ್ದಾರೆ. ಸಂಪುಟದಲ್ಲಿ ಯಾರನ್ನು ಸೇರಿಸಬೇಕು ಅಥವ ಬಿಡಬೇಕು ಎನ್ನುವ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಪೂಜಾರಿ ತಿಳಿಸಿದರು.
ಸಂಪುಟದಲ್ಲಿ ಕಾಂಗ್ರೆಸ್‌ನ ಸಚಿವರನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತದೆ ಎಂಬ ಜೆಡಿಎಸ್‌ನ ಹೇಳಿಕೆಗೆ ಪ್ರತಿಯಾಗಿ ಮೇಲಿನಂತೆ ಅವರು ಹೇಳಿಕೆ ನೀಡಿದರು.
(ಪಿಟಿಏ)
ಮುಖಪುಟ / ವಾರ್ತೆಗಳು












Click it and Unblock the Notifications