ಧ್ವಜ ಮಹಾತ್ಮೆ ಆರಂಭ ; ಹುಬ್ಬಳ್ಳಿಯಿಂದ ಹೊರಟಿಹುದು ತಿರಂಗಯಾತ್ರೆ
ಧ್ವಜ ಮಹಾತ್ಮೆ ಆರಂಭ ; ಹುಬ್ಬಳ್ಳಿಯಿಂದ ಹೊರಟಿಹುದು ತಿರಂಗಯಾತ್ರೆ
ಉಮಾ ಬದುಕಿರುವ ತನಕ ಸೋನಿಯಾ ಪ್ರಧಾನಿಯಾಗಲು ಸಾಧ್ಯವಿಲ್ಲ
ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರಧ್ವಜವನ್ನು ಉಮಾಭಾರತಿಗೆ ನೀಡುವ ಮೂಲಕ ಆಡ್ವಾಣಿ ಯಾತ್ರೆಗೆ ಚಾಲನೆ ನೀಡಿದರು. ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ವಂದೇ ಮಾತರಂ, ಭಾರತ್ ಮಾತಾಕೀ ಜೈ, ಉಮಾಭಾರತಿಗೆ ಜೈ ಎನ್ನುವ ಘೋಷಣೆಗಳನ್ನು ಕೂಗಿದರು.
ಎಲ್.ಕೆ. ಆಡ್ವಾಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯತೆ ಎತ್ತಿ ಹಿಡಿಯುವ ಸಂದರ್ಭ ಬಂದಿರುವ ಕಾರಣ ತಿರಂಗ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಕೇಂದ್ರದ ಯುಪಿಎ ಸರಕಾರದಲ್ಲಿ ಎರಡು ಶಕ್ತಿ ಕೇಂದ್ರಗಳಿವೆ. ಒಬ್ಬರು ಪ್ರಧಾನ ಮಂತ್ರಿಗಳಾದರೆ, ಮತ್ತೊಬ್ಬರು ಸೂಪರ್ ಪವರ್ ಪ್ರಧಾನಿಗಳಾಗಿದ್ದಾರೆ ಎಂದು ಸೋನಿಯಾ ಹೆಸರು ಪ್ರಸ್ತಾಪಿಸದೇ ಟೀಕಿಸಿದರು.
ಉಮಾಭಾರತಿ ಮಾತನಾಡಿ, ರಾಜ್ಯ ಸರಕಾರ ಹುಬ್ಬಳ್ಳಿಯಲ್ಲಿ ಕಪ್ಯೂ ರೀತಿಯ ವಾತಾವರಣ ನಿರ್ಮಿಸಿದೆ. ಆದರೆ ಜನರು ದೇಶಭಕ್ತಿಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ರಾಷ್ಟ್ರದಲ್ಲಿ ನಾನು ಬದುಕಿರುವ ತನಕ ವಿದೇಶಿಯರಿಗೆ ಭಾರತದ ಪ್ರಧಾನಿ ಸ್ಥಾನ ದೊರಕದು ಎಂದರು.
ಮಹಾರಾಷ್ಟ್ರದಲ್ಲಿ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆ ನಡೆಸುತ್ತಿಲ್ಲ. ಮಾರ್ಗ ಮಧ್ಯದಲ್ಲಿರುವ ಮಹಾರಾಷ್ಟ್ರ ಮೂಲಕ ಯಾತ್ರೆ ಸಾಗುತ್ತಿದೆ. ಇದು ಕೂಡದು ಎನ್ನುವವರು ಮಹಾರಾಷ್ಟ್ರದಲ್ಲಿ ಮೇಲ್ ಸೇತುವೆ ನಿರ್ಮಿಸಲಿ ಎಂದು ಉಮಾಭಾರತಿ ಹೇಳಿದರು.
ಹದಿನಾರು ದಿನಗಳ ತಿರಂಗ ಯಾತ್ರೆ ಸೆ. 25 ರಂದು ಜಲಿಯನ್ ವಾಲಾಬಾಗ್‌ನಲ್ಲಿ ಮುಕ್ತಾಯವಾಗಲಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications