ಬಂಡವಾಳಗಾರರ ಪಾಲಿಗೆ ಕರ್ನಾಟಕ ಚುಂಬಕಕೇಂದ್ರ -ಸಚಿವ ಸಿಂಧ್ಯಾ

ಬಂಡವಾಳಗಾರರ ಪಾಲಿಗೆ ಕರ್ನಾಟಕ ಚುಂಬಕಕೇಂದ್ರ -ಸಚಿವ ಸಿಂಧ್ಯಾ
ಐದು ಸರ್ಕಾರಿ ಉದ್ದಿಮೆಗಳ ಪುನಶ್ಚೇತನ, ಒಂದೂವರೆ ಲಕ್ಷ ಉದ್ಯೋಗ ಸೃಷ್ಟಿ

ಬೆಂಗಳೂರು : ಬಂಡವಾಳಗಾರರನ್ನು ಆಕರ್ಷಿಸುವಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು , ವಿವಿಧ ಕ್ಷೇತ್ರಗಳಲ್ಲಿ ಬಂಡವಾಳಹೂಡಲು ಉದ್ದಿಮೆದಾರರು ಬೆಂಗಳೂರಿಗೆ ಬರುತ್ತಲೇ ಇದ್ದಾರೆ ಎಂದು ಕೈಗಾರಿಕಾ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಹೇಳಿದರು.

ರಾಜ್ಯದಲ್ಲಿ ರೋಗಗ್ರಸ್ತ ಸರಕಾರಿ ಉದ್ದೀಮೆಗಳ ಮುಚ್ಚುವ ಬದಲಾಗಿ ಉದ್ದಿಮೆಗಳ ಪುನಶ್ಚೇತನಗೊಳಿಸುವುದು ಹಾಗೂ ಹೊಸದಾಗಿ 1.50 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು ಸಮ್ಮಿಶ್ರ ಸರಕಾರದ ಉದ್ದೇಶ. 2001ರಲ್ಲಿ ಕಾಂಗ್ರೆಸ್‌ ಸರ್ಕಾರ ಬಂಡವಾಳ ಹಿಂತೆಗೆಯುವ (ಡಿಸ್‌ಇನ್‌ವೆಸ್ಟ್‌ ಮೆಂಟ್‌) ನೀತಿ ರೂಪಿಸಿತ್ತು. ಆದರೆ ಈಗಿನ ಸರ್ಕಾರಕ್ಕೆ ಯಾವುದೇ ಕೈಗಾರಿಕೆ ಮುಚ್ಚಬೇಕು ಎಂಬ ಉದ್ದೇಶವೇ ಇಲ್ಲ ಎಂದು ಸಿಂಧ್ಯಾ ಸ್ಪಷ್ಟಪಡಿಸಿದರು.

ನಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳಿಗೆ ನವೆಂಬರ್‌ ತಿಂಗಳಿನಲ್ಲಿ 140 ಕೋಟಿ ರೂ. ಗಳ ಸಹಾಯಧನ ಬಿಡುಗಡೆ ಮಾಡಲಾಗುವುದು. ಮುಂದಿನ ಆಯವ್ಯಯದಲ್ಲಿ 150 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲು ಉಪಮುಖ್ಯ ಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ ಎಂದು ಹೇಳಿದರು.

ವಿವಿಧ ಕಂಪನಿಗಳು ರಾಜ್ಯದಲ್ಲಿ ಒಟ್ಟಾರೆ ಸುಮಾರು 23,319 ಕೋಟಿ ರೂ. ಬಂಡವಾಳ ಹೂಡುವ ಯೋಜನೆಗಳಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಉನ್ನತಾಧಿಕಾರಿ ಸಮಿತಿ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ. ಈ ವಿವಿಧ ಕಂಪನಿಗಳಿಂದ ರಾಜ್ಯದ ವಿವಿಧೆಡೆ ಹನ್ನೊಂದು ಯೋಜನೆಗಳು ಅಸ್ತಿತ್ವಕ್ಕೆ ಬರಲಿದೆ. ಈ ಕಂಪನಿಗಳು ಹೂಡುವ 23,319.91ಕೋಟಿ ರೂ. ಬಂಡವಾಳದಿಂದ 6,546 ಮಂದಿಗೆ ಕೆಲಸ ಸಿಗಲಿದೆ ಎಂದು ಸಿಂಧ್ಯಾ ಹೇಳಿದರು.

ಬಂಡವಾಳ ಹೂಡುವ ಕಂಪನಿಗಳು : ಒಎನ್‌ಜಿಸಿ-ಎಂಆರ್‌ಪಿಎಲ್‌, ಮಂಗಳೂರು ಕೆಮಿಕಲ್ಸ್‌ ಮತ್ತು ಫರ್ಟಿಲೈಸರ್ಸ್‌ ಲಿಮಿಟೆಡ್‌,ಜಂದಾಲ್‌ ಥರ್ಮಲ್‌ ಪವರ್‌ ಕಂಪನಿ ಲಿಮಿಟೆಡ್‌, ಹಂಪಿ ಇಂಡಸ್ಟ್ರೀಸ್‌ ಲಿಮಿಟೆಡ್‌, ಸಿಪ್ಲಾ ಲಿಮಿಟೆಡ್‌, ಮುದ್ರಾ ಫ್ಯಾಬ್ರಿಕ್ಸ್‌ ಲಿಮಿಟೆಡ್‌, ದವನಂ ಕನ್‌ಸ್ಟ್ರಕ್ಷನ್ಸ್‌ ಪ್ರೆೃವೇಟ್‌ ಲಿಮಿಟೆಡ್‌ ಈ ಬಂಡವಾಳ ಹೂಡಲಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+