‘ಧ್ವಜ ಮಹಾತ್ಮೆ’ತಿರಂಗ ಯಾತ್ರೆಗೆ ಹೊಸ ಹುಮ್ಮಸ್ಸಿನ ಉಮಾ ಸನ್ನದ್ಧ
‘ಧ್ವಜ ಮಹಾತ್ಮೆ’ತಿರಂಗ ಯಾತ್ರೆಗೆ ಹೊಸ ಹುಮ್ಮಸ್ಸಿನ ಉಮಾ ಸನ್ನದ್ಧ
ಯಾತ್ರೆಯ ಅಡ್ಡ ಪರಿಣಾಮಗಳನ್ನು ತಡೆಯಲು ಸಿದ್ಧವೆಂದ ರಾಜ್ಯ ಸರಕಾರ
ಯಾತ್ರೆಯು ಧಾರವಾಡ, ಕಿತ್ತೂರು, ಬೀದರ್, ಗುಲ್ಪಗಾಂ, ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪೂರ ಮಾರ್ಗವಾಗಿ ಮಹಾರಾಷ್ಟ್ರ ಪ್ರವೇಶಿಸಿ, ನಂತರ ಕರ್ನಾಟಕ ಮತ್ತೆ ರಾಜ್ಯಕ್ಕೆ ಪ್ರವೇಶಿಸಲಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ, ಬಂಧನಕ್ಕೆ ಒಳಗಾಗಿದ್ದ ಉಮಾ ಎಲ್ಲಾ ಆರೋಪಗಳಿಂದ ಮುಕ್ತರೆಂದು ಹುಬ್ಬಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯ ಸೋಮವಾರ ತೀರ್ಪು ನೀಡಿತ್ತು.
ನ್ಯಾಯಾಲಯಕ್ಕೆ ಶರಣಾಗುವ ಸಂದರ್ಭದಲ್ಲಿ ಘೋಷಿಸಿದಂತೆ, ಉಮಾ ಭಾರತಿ ತಿರಂಗಿ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮನ್ಮ ವಿಗ್ರಹಕ್ಕೆ ಪೂಜೆ ಸಲ್ಲಿಸುವ ಮೂಲಕ ಯಾತ್ರೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ನಾವೂ ಸಿದ್ಧ: ಉಮಾ ಭಾರತಿ ನೇತೃತ್ವದ ಬಿಜೆಪಿಯ ತಿರಂಗಯಾತ್ರೆಯಿಂದ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕೆಡದಂತೆ ಕಾಪಾಡಲು ಸರಕಾರ ಸಿದ್ಧತೆ ನಡೆಸಿದೆ ಎಂದು ಮುಖ್ಯಮಂತ್ರಿ ಎನ್.ಧರ್ಮಸಿಂಗ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications