ಮೈಸೂರಿನ ‘ಶ್ರೀ ಚಾಮರಾಜೇಂದ್ರ ಮೃಗಾಲಯ’ದಲ್ಲಿ ರೂಪಾ ಸಾವು
ಮೈಸೂರಿನ ‘ಶ್ರೀ ಚಾಮರಾಜೇಂದ್ರ ಮೃಗಾಲಯ’ದಲ್ಲಿ ರೂಪಾ ಸಾವು
ಎಂಟು ದಿನಗಳ ಅಂತರದಲ್ಲಿ ಮೂರು ಪ್ರಾಣಿಗಳ ಸಾವು, ಸಿಬ್ಬಂದಿ ಆತಂಕ
ಇತ್ತೀಚೆಗಷ್ಟೇ ಸಿಂಹವೊಂದರ ಅಂತಿಮ ಸಂಸ್ಕಾರಕ್ಕೆ ಸಾಕ್ಷಿಯಾಗಿದ್ದ ಮೈಸೂರು ಮೃಗಾಲಯದಲ್ಲಿ ಮಂಗಳವಾರ ಆನೆಯಾಂದು ಸಾವನ್ನಪ್ಪಿತು. ರೂಪಾ ಎನ್ನುವ 14 ವರ್ಷದ ಹೆಣ್ಣಾನೆ ಸೆ.7ರ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆಯಿತು. ಸೋಮವಾರದಿಂದಲೇ ರೂಪಾ ಊಟ ತ್ಯಜಿಸಿ ಮಂಕಾಗಿದ್ದಳು.
ರೂಪಾಳಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಲಿಲ್ಲ . ಮರಣೋತ್ತರ ಪರೀಕ್ಷೆಯಿಂದ ಆಕೆಯ ದೇಹದಲ್ಲಿ ಟಾಕ್ಸಿನ್ ಪತ್ತೆಯಾಗಿದೆ. ಮೆದುಳಿನಲ್ಲಿ ಉಂಟಾದ ತೀವ್ರ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿರಬಹುದು ಎಂದು ಮೃಗಾಲಯದ ನಿರ್ದೇಶಕ ಮನೋಜ್ ಕುಮಾರ್ ಹೇಳಿದ್ದಾರೆ.
ಕಳೆದ ಎಂಟು ದಿನಗಳಲ್ಲಿ ಮೃಗಾಲಯದಲ್ಲಿ ಸಂಭವಿಸುತ್ತಿರುವ ಮೂರನೇ ಸಾವು ಇದಾಗಿದೆ. ಈ ನಿರಂತರ ಸಾವುಗಳಿಗೆ ಕಾರಣ ತಿಳಿದುಬಂದಿಲ್ಲ . ರೂಪಾ ಯಾವುದೇ ತೊಂದರೆ ಅನುಭವಿಸುತ್ತಿರಲಿಲ್ಲ . ಈ ಮುನ್ನ ಕೂಡ ಆಕೆಗೆ ಯಾವುದೇ ತೊಂದರೆ ಇರಲಿಲ್ಲ ಎಂದು ಮನೋಜ್‌ಕುಮಾರ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications