ನಿಟ್ಟೂರು ನೆನಪಿಗೆ ಸ್ಮಾರಕ ನಿರ್ಮಿಸಲು ದೆಹಲಿ ಕನ್ನಡಿಗರ ನಿರ್ಣಯ
ನಿಟ್ಟೂರು ನೆನಪಿಗೆ ಸ್ಮಾರಕ ನಿರ್ಮಿಸಲು ದೆಹಲಿ ಕನ್ನಡಿಗರ ನಿರ್ಣಯ
ದೆಹಲಿಯಲ್ಲಿ ‘ನಿಟ್ಟೂರರಿಗೆ ಭಾವಪೂರ್ಣ ನಮನ’ ಕಾರ್ಯಕ್ರಮ
ನವದೆಹಲಿಯಲ್ಲಿ ದೆಹಲಿ ಕನ್ನಡಿಗರು ಇತ್ತೀಚೆಗೆ ಏರ್ಪಡಿಸಿದ್ದ ‘ನಿಟ್ಟೂರಿಗೆ ಭಾವಪೂರ್ಣ ನಮನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನ್ನಡ ಸಾಹಿತಿಗಳು, ಕಲಾವಿದರು, ಪ್ರಾಧ್ಯಾಪಕರು, ಕನ್ನಡ ಕಾರ್ಯಕರ್ತರು ಈ ನಿರ್ಧಾರ ಕೈಗೊಂಡಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕಿ ಹಾಗೂ ಲೇಖಕಿ ಪ್ರೊ. ಲಕ್ಷ್ಮಿಜಂಬೋಲ್ಕರ್ ಮಾತನಾಡಿ, ಸ್ವಾತಂತ್ರ್ಯಹೋರಾಟಗಾರೂ ಗಾಂಧಿ ಅನುಯಾಯಿಗಳೂ ಆಗಿದ್ದ ನಿಟ್ಟೂರರು ಖಾದಿ ಚಳವಳಿಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಸತ್ಯಶೋಧನ ಪುಸ್ತಕ ಭಂಡಾರ ಸ್ಥಾಪಿಸಿ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ಸಲ್ಲಿಸಿದ್ದಾರೆ ಎಂದರು.
ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ.ಸಾಮಗ ಮಾತಾನಾಡಿ, ವಿವಿಧ ಮಹತ್ವದ ಹುದ್ದೆಗಳನ್ನು ನಿಟ್ಟೂರರು ಅಲಂಕರಿಸಿದರೂ ಜನಸಾಮನ್ಯರೊಂದಿಗೆ ಬೆರೆಯುತ್ತಿದ್ದರು ಎಂದರು.
ಹೊರನಾಡ ಕನ್ನಡಿಗರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದ ನಿಟ್ಟೂರರನ್ನು 1997ರಲ್ಲಿ ದೆಹಲಿ ಕನ್ನಡಿಗ ಪತ್ರಿಕೆ ಭೋಪಾಲ್‌ನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದಲ್ಲಿ ಸನ್ಮಾನಿಸಿದ್ದನ್ನು ಬಾ.ಸಾಮಗ ಸ್ಮರಿಸಿದರು.
ಕನ್ನಡ ಸಂಘಟನೆಯ ಅನುಪಮ ಸತ್ಯಪ್ರಕಾಶ್, ಕರ್ನಾಟಕದ ಹಂಗಾಮಿ ರಾಜ್ಯಪಾಲರಾಗಿದ್ದಾಗ ನಿಟ್ಟೂರ್ ಶ್ರೀನಿವಾಸರಾವ್ ಕನ್ನಡದಲ್ಲಿ ಮಾತನಾಡಿ ಹೊಸ ಮೇಲ್ಪಂಕ್ತಿಯನ್ನು ಹಾಕಿದರೆಂದು ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications