ಭಯೋತ್ಪಾದನೆ ನಿಗ್ರಹಕ್ಕೆ ಭಾರತದ ಒತ್ತು , ಕಾಶ್ಮೀರ ಸುತ್ತ ಪಾಕ್ ಸುತ್ತು
ಭಯೋತ್ಪಾದನೆ ನಿಗ್ರಹಕ್ಕೆ ಭಾರತದ ಒತ್ತು , ಕಾಶ್ಮೀರ ಸುತ್ತ ಪಾಕ್ ಸುತ್ತು
ಪರಸ್ಪರ ವಿಶ್ವಾಸ ವೃದ್ಧಿಸಿಕೊಳ್ಳಲು ಮಾತುಕತೆಗೆ ಪಾಕಿಸ್ತಾನ-ಭಾರತ ಒಪ್ಪಿಗೆ
ಸೋಮವಾರ ಒಂದು ಗಂಟೆ ನಡೆದ ಮಾತುಕತೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಮೆಹಮೂದ್ ಕಸೂರಿ ಮತ್ತು ಭಾರತದ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ತಮ್ಮೊಳಗಿನ ಭಿನ್ನಭಿಪ್ರಾಯಗಳನ್ನು ಮುಂದಿಟ್ಟರು. ಮಾತುಕತೆಯಲ್ಲಿ ಕಾಶ್ಮೀರವೇ ಕೇಂದ್ರ ಬಿಂದುವಾಗಬೇಕೆಂಬ ಹಳೆಯ ಒತ್ತಾಯ ವನ್ನು ಪಾಕಿಸ್ತಾನ ಪ್ರಸ್ತಾಪಿಸಿದರೆ, ಮೊದಲು ಗಡಿಯಾಚೆಗಿನ ಭಯೋತ್ಪಾದನೆ ಅಂತ್ಯಗೊಳ್ಳಬೇಕೆಂದು ಭಾರತ ಪಟ್ಟು ಹಿಡಿಯಿತು. ಕೆಲವು ಭಿನ್ನಭಿಪ್ರಾಯಗಳ ಹೊರತಾಗಿಯೂ ಮಾತುಕತೆ ಆಶಾದಾಯಕವಾಗಿ ಕೊನೆಗೊಂಡಿತು.
ತಿಂಗಳ ಕೊನೆಗಳಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ನಡೆಸುವ ಮಾತುಕತೆ ಉಭಯ ದೇಶಗಳ ಸಂಬಂಧ ಸುಧಾರಣೆಗೆ ಇನ್ನಷ್ಟು ಸಹಕಾರಿಯಾಗ ಬಹುದು ಎಂದು ಉಭಯ ಬಣಗಳು ವಿಶ್ವಾಸ ವ್ಯಕ್ತಪಡಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications