ಉತ್ತರಕರ್ನಾಟಕಕ್ಕೆ ಪೀಠ ಕೊಡಿ, ಇಲ್ಲ ಪ್ರತ್ಯೇಕತೆ ನೀಡಿ ;ಚಳವಳಿ ತೀವ್ರ
ಉತ್ತರಕರ್ನಾಟಕಕ್ಕೆ ಪೀಠ ಕೊಡಿ, ಇಲ್ಲ ಪ್ರತ್ಯೇಕತೆ ನೀಡಿ ;ಚಳವಳಿ ತೀವ್ರ
ಹೈಕೋರ್ಟ್ ನ್ಯಾಯಾಧೀಶರ ಮನವೊಲಿಸಲು ಸರ್ವಪಕ್ಷಗಳ ನಿರ್ಧಾರ
ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಆಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ , ಭಾಗವಹಿಸಿದ್ದ ಉತ್ತರ ಕರ್ನಾಟಕದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಾಹಿತಿಗಳು, ವಕೀಲರ ಸಂಘದ ಮುಖಂಡರು ಪೀಠದ ಬಗೆಗೆ ಚರ್ಚಿಸಿದರು.
ಆದರೆ ಈ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ 9 ಜಿಲ್ಲೆಗಳ ವಕೀಲರ ಸಂಘದ ಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಪ್ರತ್ಯೇಕ ರಾಜ್ಯದ ಬೇಡಿಕೆ ಹಾಗೂ ಪೀಠದ ಚಳವಳಿ ಮುಂದುವರೆಸುವ ತನ್ನ ಬಿಗಿಪಟ್ಟನ್ನು ಹೋರಾಟ ಸಮಿತಿ ಸಡಿಲಿಸಿಲ್ಲ.
ಪೀಠದ ಬಗೆಗೆ ಒತ್ತಾಯಿಸಿ ರಾಷ್ಪ್ರಪತಿಯವರಿಗೆ ಬೇಡಿಕೆ ಸಲ್ಲಿಸಲು ದೆಹಲಿಗೆ ತೆರಳಲು ರಾಜ್ಯದ ಬಾರ್ ಅಸೋಸಿಯೇಷನ್ ತನ್ನ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.
(ಇನ್ಫಾ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications