ಉಮಾ ಬಂಧಮುಕ್ತಿ : ಸೆ. 8 ರಂದು ಬಿಜೆಪಿಯಿಂದ ‘ವಿಜಯ ಯಾತ್ರೆ’
ಉಮಾ ಬಂಧಮುಕ್ತಿ : ಸೆ. 8 ರಂದು ಬಿಜೆಪಿಯಿಂದ ‘ವಿಜಯ ಯಾತ್ರೆ’
ಉಮಾ ಭಾರತಿ ಪ್ರಕರಣ ಕೈಬಿಡಲು ಹುಬ್ಬಳ್ಳಿ ನ್ಯಾಯಾಲಯ ಒಪ್ಪಿಗೆ
ಉಮಾ ವಿರುದ್ಧದ ಪ್ರಕರಣಗಳ ವಾಪಸಾತಿಗೆ ಹುಬ್ಬಳ್ಳಿನ್ಯಾಯಾಲಯ ಒಪ್ಪಿದೆ.
ಪ್ರಥಮ ದರ್ಜೆ ಮುಖ್ಯ ಮ್ಯಾಜಿಸ್ಟ್ರೇಟ್ ಮಹಮ್ಮದ್ ಇಸ್ಮಾಯಿಲ್‌ರವರು, 2002ರಲ್ಲಿ ಉಮಾ ಸೇರಿದಂತೆ 21 ಮಂದಿ ವಿರುದ್ಧದ ಮೊಕದ್ದಮೆ ವಾಪಸಾತಿಗೆ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸಿದ್ದ ಅರ್ಜಿಯನ್ನು ಮನ್ನಿಸಿದ್ದಾರೆ. ಅಲ್ಲದೇ ಉಮಾಭಾರತಿಯನ್ನು ಬಿಡುಗಡೆ ಮಾಡದಂತೆ ಪತ್ರಕರ್ತೆ ಗೌರಿಲಂಕೇಶ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದ್ದಾರೆ.
ನ್ಯಾಯಮೂರ್ತಿಗಳು ಉಮಾ ಬಿಡುಗಡೆಗೆ ಹುಬ್ಬಳ್ಳಿ ಉಪ ಬಂಧೀಖಾನೆ ಆಡಳಿತಕ್ಕೆ ಆದೇಶಿಸಿದ್ದಾರೆ. ಮಧ್ಯಪ್ರದೇಶದಿಂದ ಆಗಮಿಸಿ, ಕೋರ್ಟ್ ಆವರಣದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಸಂತಸಗೊಂಡಿದ್ದಾರೆ.
ವಿಜಯ ಯಾತ್ರೆ : ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್, ರಾಜ್ಯಸರಕಾರಕ್ಕೆ ನ್ಯಾಯಾಲಯದ ತೀರ್ಪು ತಕ್ಕ ಪಾಠ ಕಲಿಸಿದೆ. ಘೋಷಿಸಿದಂತೆ ತಿರಂಗ ಯಾತ್ರೆ ಆರಂಭವಾಗಲಿದೆ. ಅಲ್ಲದೇ ಸೆ.8 ರಂದು ಬೆಂಗಳೂರಿನಲ್ಲಿ ವಿಜಯ ರ್ಯಾಲಿಯನ್ನು ಪಕ್ಷ ಆಯೋಜಿಸಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications