ಉಮಾ ಭಾರತಿ ಬಿಡುಗಡೆ, ದೇಶಾದ್ಯಂತ ಬಿಜೆಪಿಯ ‘ವಿಜಯೋತ್ಸವ’

ಉಮಾ ಭಾರತಿ ಬಿಡುಗಡೆ, ದೇಶಾದ್ಯಂತ ಬಿಜೆಪಿಯ ‘ವಿಜಯೋತ್ಸವ’
ಹೋರಾಟಕ್ಕೆ ಸಂದ ಜಯ -ಅನಂತಕುಮಾರ್‌ ಬಣ್ಣನೆ

ಹುಬ್ಬಳ್ಳಿ : 10 ವರ್ಷಗಳಷ್ಟು ಹಳೆಯದಾದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಸೋಮವಾರ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು.

ಉಮಾ ಭಾರತಿ ವಿರುದ್ಧದ ಪ್ರಕರಣವನ್ನು ವಾಪಸ್ಸು ಪಡೆಯಲು ತನ್ನ ಅಡ್ಡಿಯಿಲ್ಲ ಎಂದು ಸರ್ಕಾರ ಸಲ್ಲಿಸಿದ್ದ ಲಿಖಿತ ಹೇಳಿಕೆಯನ್ನು ಮನ್ನಿಸಿದ ನ್ಯಾಯಾಲಯ, ಉಮಾ ಭಾರತಿ ಅವರನ್ನು ಬಂಧಮುಕ್ತಗೊಳಿಸಲು ಸೋಮವಾರ ಬೆಳಗ್ಗೆ ಆದೇಶಿಸಿತ್ತು . ಈ ಆದೇಶದ ಅನ್ವಯ ಔಪಚಾರಿಕ ಪ್ರಕ್ರಿಯೆಗಳ ನಂತರ ಸೋಮವಾರ ಮಧ್ಯಾಹ್ನ ಉಮಾ ಬಿಡುಗಡೆಗೊಂಡರು.

ಉಮಾಭಾರತಿ ಅವರನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಬಂಧನದಲ್ಲಿಡಲಾಗಿತ್ತು . ಅವರ 14 ದಿನಗಳ ನ್ಯಾಯಾಂಗ ಬಂಧನ ಸೆ. 7ರ ಮಂಗಳವಾರ ಕೊನೆಗೊಳ್ಳುತ್ತಿತ್ತು .

ಉಮಾಭಾರತಿ ಬಿಡುಗಡೆಯನ್ನು ಭಾರತೀಯ ಜನತಾಪಕ್ಷಕ್ಕೆ ಸಂದ ಜಯ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಅನಂತಕುಮಾರ್‌ ಬಣ್ಣಿಸಿದ್ದಾರೆ. ಈ ನಡುವೆ ದೇಶಾದ್ಯಂತ ವಿಜಯಾಚರಣೆ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ. ಭೋಪಾಲದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಕಾಂಗ್ರೆಸ್‌ ಕಚೇರಿಯೆದುರು ಗುಂಪುಗೂಡಿದ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕಿಗೆ ಜೈಕಾರ ಕೂಗುತ್ತ ಡ್ರಂ ಬಾರಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಉಜ್ಜಯಿನಿ, ಗ್ವಾಲಿಯರ್‌, ಜಬಲ್‌ಪುರ್‌ ಹಾಗೂ ಇಂದೋರ್‌ಗಳಲ್ಲೂ ಸಂಭ್ರಮ ಜೋರಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+