ಬೆಂಗಳೂರು ದೇಶದ ಕುರುಕ್ಷೇತ್ರ ; ‘ಧರ್ಮ’ ಯುದ್ಧ ಆರಂಭ -ಬಿಜೆಪಿ
ಬೆಂಗಳೂರು ದೇಶದ ಕುರುಕ್ಷೇತ್ರ ; ‘ಧರ್ಮ’ ಯುದ್ಧ ಆರಂಭ -ಬಿಜೆಪಿ
ಸತ್ಯಾಗ್ರಹ ಸಪ್ತಾಹದಲ್ಲಿ ಮಾಜಿ ಸಚಿವರಾದ ಯಶವಂತ್ ಸಿನ್ಹಾ ಬಂಧನ
ಉಮಾಭಾರತಿ ಬಂಧಮುಕ್ತಿಗಾಗಿ ಬಿಜೆಪಿ ನಗರದ ಟೌನ್ ಹಾಲ್ ಮುಂಭಾಗದಲ್ಲಿ ನಡೆಸುತ್ತಿರುವ ಸತ್ಯಾಗ್ರಹದ ನಾಲ್ಕನೇದಿನವಾದ ಶನಿವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರದಲ್ಲಿನ ಯುಪಿಎ ಆಡಳಿತ ನೂರು ದಿನಗಳನ್ನು ಗಮನಿಸಿದರೆ ತೀವ್ರ ನಿರಾಸೆಯಾಗುತ್ತದೆ. ಪ್ರಧಾನಿ ಮನಮೋಹನ್‌ಸಿಂಗ್, ಮಾಂಟೆಕ್ ಸಿಂಗ್ ಆಹ್ಲುವಾಲಿಯಾ, ಚಿದಂಬರಂರಂಥ ಅರ್ಥಿಕ ತಜ್ಞರಿದ್ದರೂ, ಹಣದುಬ್ಬರ ಸರಕಾರದ ಹಿಡಿತದಲ್ಲಿಲ್ಲ ಎಂದು ಸಿನ್ಹಾ ಹೇಳಿದರು.
ಬಂಧನ : ಯಶವಂತ್ ಸಿನ್ಹಾ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಬಾಬು ಲಾಲ್ ಮರಾಂಡಿ, ಮಣಿಪುರದ ಮಾಜಿ ಸಚಿವ ಚೋಬಾ ಸಿಂಗ್, ಜಾರ್ಖಂಡ್ ಬಿಜೆಪಿ ಆಧ್ಯಕ್ಷ ರಘುವರ್ ದಾಸ್, ಬಸವನಗೌಡ ಪಾಟೀಲ್ ಯತ್ನಾಲ್ ಸೇರಿದಂತೆ ಜಾರ್ಖಂಡ್, ಒರಿಸ್ಸಾ, ರಾಜ್ಯಗಳಿಂದ ಆಗಮಿಸಿದ್ದ ಬಿಜೆಪಿ ಸಂಸದರು, ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದರು.
ಸತ್ಯಾಗ್ರಹ ಸಪ್ತಾಹದ ಐದನೇ ದಿನವಾದ ಭಾನುವಾರ ಸಹಾ ಧರಣಿ ಮುಂದುವರೆದಿದೆ. ಉಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಲಿದ್ದು , ಬಿಜೆಪಿ ಕುತೂಹಲದಿಂದ ಕಾಯುತ್ತಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications