ಗಂಗೂಬಾಯಿ ಹಾನಗಲ್‌ ಪುತ್ರಿ ವಿದುಷಿ ಕೃಷ್ಣಾ ಹಾನಗಲ್‌ ವಿಧಿವಶ

ಗಂಗೂಬಾಯಿ ಹಾನಗಲ್‌ ಪುತ್ರಿ ವಿದುಷಿ ಕೃಷ್ಣಾ ಹಾನಗಲ್‌ ವಿಧಿವಶ
ಅವಿವಾಹಿತರಾಗಿಯೇ ಉಳಿದಿದ್ದ ಕೃಷ್ಣಾ ದೇಶವಿದೇಶಗಳಲ್ಲಿ ಕಚೇರಿ ನೀಡಿದ್ದರು

ಬೆಂಗಳೂರು : ಗಂಗೂಬಾಯಿ ಹಾನಗಲ್‌ ಅವರ ಗಾಯನಕ್ಕೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜೊತೆ ನೀಡಿದ ಅವರ ಪುತ್ರಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿಂದೂಸ್ತಾನಿ ಗಾಯಕಿ ಕೃಷ್ಣಾ ಹಾನಗಲ್‌(75) ಸೆ.2ರ ಗುರುವಾರ ನಿಧನರಾದರು.

ಅವಿವಾಹಿತರಾಗಿಯೇ ಉಳಿದಿದ್ದ ಅವರು 1956ರಿಂದ ತಮ್ಮ ತಾಯಿಯ ಜೊತೆಗೂಡಿ ದೇಶವಿದೇಶದಲ್ಲೆಲ್ಲಾ ಕಚೇರಿಗಳಲ್ಲಿ ಪಾಲ್ಗೊಂಡಿದ್ದರು. ಗಂಗೂ ಬಾಯಿ ಹಾನಗಲ್‌ರಿಂದ ‘ಕಿರಾಣಾ ಘರಾನಾ’ದ ಸಂಗೀತ ಶಿಕ್ಷಣವನ್ನು ಕೃಷ್ಣಾ ಪಡೆದುಕೊಂಡಿದ್ದರು

ಸಂದ ಬಿರುದುಗಳು ಮತ್ತು ಪ್ರಶಸ್ತಿಗಳು : ಶಾಸ್ತ್ರೀಯ ಮತ್ತು ಲಘು ಶಾಸ್ತ್ರೀಯ ಗಾಯನದಲ್ಲಿ ಆಕಾಶವಾಣಿಯ‘ ಎ’ ಶ್ರೇಣಿಯ ಕಲಾವಿದರಾಗಿದ್ದರು.

1968ರಲ್ಲಿ ಮುಂಬೈ ಯಲ್ಲಿ ನಡೆದ ‘ಕಲ್‌ಕೆ ಕಲಾಕಾರ್‌’ ಸಮ್ಮೇಳನ್‌ದಲ್ಲಿ ಸುರ್‌ಮಣಿ ಬಿರುದು ನೀಡಲಾಗಿತ್ತು. 1991-92ರಲ್ಲಿ ಸಂಗೀತ ನೃತ್ಯ ಅಕಾಡೆಮಿಯಿಂದ ಅವರಿಗೆ ಕರ್ನಾಟಕ ‘ಗಾನ ಕಲಾತಿಲಕ ’ಬಿರುದು ಸಂದಿತು. 1998ರಲ್ಲಿ ಸೊರಬದಲ್ಲಿ ನಾಡಿಗೇರರ ಸ್ಮರಣಾರ್ಥ ಅವರಿಗೆ ‘ಚಂದ್ರ ಹಾಸ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2000ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿತ್ತು.

ಗುರುವಾರ ರಾತ್ರಿ ನಡೆದ ಕೃಷ್ಣಾ ಹಾನಗಲ್‌ರ ಅಂತ್ಯಕ್ರಿಯೆಯಲ್ಲಿ ಸಂಗೀತ ಜಗತ್ತಿನ ಹಲ ಪ್ರಮುಖರು, ಗಣ್ಯರು ಪಾಲ್ಗೊಂಡು ಅಗಲಿದ ಸಂಗೀತ ವಿದುಷಿಗೆ ಅಂತಿಮ ನಮನ ಸಲ್ಲಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+