ಬಿಜೆಪಿ ಸತ್ಯಾಗ್ರಹಕ್ಕೆ ಕಾಂಗ್ರೆಸ್‌ನ ‘ಸಂಘ ಪರಿವಾರ ವಿರೋಧ’ ಉತ್ತರ
ಬಿಜೆಪಿ ಸತ್ಯಾಗ್ರಹಕ್ಕೆ ಕಾಂಗ್ರೆಸ್‌ನ ‘ಸಂಘ ಪರಿವಾರ ವಿರೋಧ’ ಉತ್ತರ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಧ್ವಜ ಹಾರಿಸಲು ಬಿಜೆಪಿ-ಸಂಘ ಪರಿವಾರಕ್ಕೆ ಪೂಜಾರಿ ಸವಾಲು
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಕಾಂಗ್ರೆಸ್‌ನ ಪ್ರತಿಭಟನೆಯನ್ನು, ಪಕ್ಷದ ಅಧ್ಯಕ್ಷ ಬಿ.ಜನಾರ್ಧನ ಪೂಜಾರಿ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರಧ್ವಜದ ನೆಪದಲ್ಲಿ ಯುವಕರನ್ನು ಪ್ರಚೋದಿಸಿ ದೊಂಬಿ, ಹಿಂಸೆಗೆ ಆಸ್ಪದ ನೀಡಿದ್ದ ಉಮಾಭಾರತಿ ಮೇಲಿನ ಮೊಕದ್ದಮೆಗಳನ್ನು ರಾಜ್ಯಸರಕಾರ ವಾಪಸ್ಸು ಪಡೆಯುವ ಪ್ರಶ್ನೆಯೇ ಇಲ್ಲ. ಈ ಬಗೆಗೆ ಪಕ್ಷ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಲಿದೆ ಎಂದು ಜನಾರ್ಧನ ಪೂಜಾರಿ ಹೇಳಿದರು.
ನ್ಯಾಯಾಂಗದ ಮೇಲೆ ವಿಶ್ವಾಸವಿಲ್ಲದೇ ಒತ್ತಡತಂತ್ರದ ಮೂಲಕ ವಾಜಪೇಯಿ, ಅಡ್ವಾಣಿ, ಮುಂತಾದವರು ಉಮಾಭಾರತಿಯನ್ನು ಶಿಕ್ಷೆಯಿಂದ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ದೇಶದ ಸ್ವಾತಂತ್ರ ್ಯಕ್ಕಾಗಿ ಗುಂಡಿಗೆ ಎದೆಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ಹೊಸದಾಗಿ ಈಗ ಬಿಜೆಪಿ ರಾಷ್ಟ್ರಧ್ವಜದ ಪಾಠ ಕಲಿಸುವ ಅಗತ್ಯವಿಲ್ಲ ಎಂದರು.
ಮಾಜಿ ಸಚಿವ ರಮಾನಾಥ ರೈ, ಮಂಗಳೂರು ಮೇಯರ್ ಪುರಂದರದಾಸ್ ಕೂಳೂರು, ಉಪಮೇಯರ್ ಸುಜಾತಾ ಆಹಲ್ಯಾ, ಬಿ.ಸದಾನಂದ ಪೂಂಜ, ತಾರಾನಾಥ ಶೆಟ್ಟಿ ಮತ್ತಿತರರು ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications